ಕಡಲ ಹುಡುಗಿ

Author : ಪೂರೀಗಾಲಿ ಮರಡೇಶಮೂರ್ತಿ

Pages 104

₹ 60.00




Year of Publication: 2011
Published by: ಲಿಖಿತ ಸ್ವರೂಪ್ ಪಬ್ಲಿಕೇಷನ್
Address: ನಂ. 06, 2ನೇ ಮಹಡಿ, ಅಲ್ಲಮಪ್ರಭು ಕಾಂಪ್ಲೆಕ್ಸ್ , ವೀರಶೈವ ಅನಾಥಾಲಯ, 5ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು -570004
Phone: 9449526390

Synopsys

ಸಮುದ್ರ ಎನ್ನುವುದೇ ಮೋಹಕವಾಗಿ ಕಾಣತ್ತದೆ. ಕಡಲಿನ ಸೌಂದರ್ಯ, ವಿಸ್ಮಯ, ಅಲೆಗಳ ಅಬ್ಬರವೂ ಇದೆ. ನಮ್ಮದೇ ಬದುಕಿನ ಏನೆಲ್ಲ ತಾಕಲಾಟಗಳನ್ನು ಈ 'ಕಡಲಕನ್ಯೆ' ತೆರೆದಿಡುತ್ತಾಳೆ. "ಕಡಲ ಕನ್ಯೆ ನಕ್ಕಾಗ ಮುತ್ತು ರತ್ನಗಳು ! ಮುನಿಸಿಕೊಂಡು ಅತ್ತಾಗ ಕಪ್ಪೆ ಚಿಪ್ಪುಗಳು!" ಎನ್ನುವ ಕವಿ ಕಡಲ ಕನ್ಯೆ ಕವಿತೆಯಲ್ಲಿ "ಕಡಲ ಕನ್ಯೆ ಮೈಮುರಿದು ಎದ್ದಾಗ ; ಉದಯರಾಗ ! ಮೈಕೊಡವಿ ಬಿದ್ದಾಗ ; ಕಡು ಕೆಂಪನೆಯ ಸಂಧ್ಯಾರಾಗ!” ಎನ್ನುತ್ತಾ ಕಡಲನ್ನು ಸೌಂದರ್ಯ ವತಿಯಾಗಿ ಮನತುಂಬಿ ಕವಿ ಪೂರೀಗಾಲಿ ಮರಡೇಶ ಮೂರ್ತಿ ಹೇಳಿಕೊಂಡಿದ್ದಾರೆ.

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books