ಭಾವಜೀವಿಯ ಅಂತರಂಗ

Author : ರಮೇಶ ಅಂಚಲ್ಕರ್

Pages 84

₹ 80.00
Year of Publication: 2018
Published by: ಕಾವ್ಯ ಮಿತ್ರ ಪ್ರಕಾಶನ
Address: 31/482 ಸದಾನಂದ ಕಾಲೋನಿ ಬಸವಕಲ್ಯಾಣ, ಬೀದರ್, ಕರ್ನಾಟಕ- 585327
Phone: 9738482040

Synopsys

ರಮೇಶ ಅಂಚಲ್ಕರ್ ಅವರ ಕವನ ಸಂಕಲನ ‘ಭಾವಜೀವಿಯ ಅಂತರಂಗ’. ತಮ್ಮ ಬರವಣಿಗೆ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮಿಡಿತವನ್ನು ಇಲ್ಲಿಯ ಕವಿತೆಗಳಲ್ಲಿ ಕಾಣಬಹುದು. ಸದಾ ರಚನಾತ್ಮಕ ವಿಚಾರ-ಚಿ೦ತನೆ ಗಳಲ್ಲಿ ತೊಡಗಿಸಿಕೊಳ್ಳಬಯಸುವ ರಮೇಶ್, ಕನ್ನಡ ಕಾವ್ಯ ಲೋಕದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ ಈ ಕವನ ಸಂಕಲನವು ’ಮುನ್ನುಡಿಯಂತೆ’ ಎಂದು ಹೇಳಬಹುದು.

ಕವಿತೆ ಜನರನ್ನು ತಲುಪಬೇಕಾದರೆ ಅದು ಸರಳವಾಗಿರಬೇಕು.ಕ್ಲಿಷ್ಟಕರ ಪದಪುಂಜವಾಗಿರಬಾರದು ಎಂಬ ವಾಸ್ತವಿಕತೆಯನ್ನು ಕವಿ ರಮೇಶ್‌ ಅರ್ಥೈಸಿಕೊಂಡಿರುವುದರಿಂದ ಅವರ ಕವಿತೆಗಳು ಬಹುತೇಕ ಅದೇ ಧೋರಣೆಯ ದಾರಿಯಲ್ಲಿ ಪಯಣಿಸುವುದನ್ನು ಇಲ್ಲಿಯ ಕವಿತೆಗಳಲ್ಲಿ ಕಾಣಬಹುದಾಗಿದೆ.

About the Author

ರಮೇಶ ಅಂಚಲ್ಕರ್
(15 December 1977)

ರಮೇಶ ಅಂಚಲ್ಕರ್ ಮೂಲತಃ ಕನಕಪುರದವರು. ತಂದೆ ನಾಗಭೂಷಣ ರಾವ್, ತಾಯಿ- ಸರಸ್ವತಿ ಬಾಯಿ. ಇವರ ಮಾತೃಭಾಷೆ ಮರಾಠಿ. ಪ್ರಾಥಮಿಕ ಶಿಕ್ಷಣವನ್ನು ದಯಾನಂದ ವಸತಿ ವಿದ್ಯಾಲಯ ಹಾಗೂ ಪ್ರೌಢ ಶಿಕ್ಷಣವನ್ನು ಮುನಿಸಿಪಲ್ ಹೈಸ್ಕೂಲ್ ನಲ್ಲಿ ಪೂರ್ಣಗೊಳಿಸಿದರು. ಕನಕಪುರದ ರೂರಲ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದರು. ಓದಿನ ಜೊತೆಗೆ ರೆಡಿಮೇಡ್ ಗಾರ್ಮೆಟ್ಸ್ ಅಂಗಡಿಯಲ್ಲಿ ಐದು ವರ್ಷ ಸೇಲ್ಸ್ ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದ ಅವರು, ಖಾಸಗಿ ಕಂಪನಿಯಲ್ಲಿ ಲೆಕ್ಕ ಪರಿಶೋಧಕರಾಗಿಯೂ ಕೆಲಸ ಮಾಡಿದ್ದಾರೆ. ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಪದವಿ ಪಡೆದರು. ಪ್ರಸ್ತುತ ಅಂತಾರಾಷ್ಟ್ರೀಯ ಕಂಪನಿಯಲ್ಲಿ ’ಬಿಸಿನೆಸ್ ಹೆಡ್’ ಆಗಿದ್ದು, ಬೆಂಗಳೂರಿನ ಆಡುಗೋಡಿಯಲ್ಲಿ ವಾಸವಾಗಿದ್ದಾರೆ. ಹನಿಗವನ, ಕವಿತೆ ...

READ MORE

Related Books