ಅಮ್ಮನಿಗೊಂದು ಕವಿತೆ

Author : ಪ್ರಕಾಶ ಕಡಮೆ

Pages 1

₹ 1.00
Published by: ನಾಗಸುಧೆ ಪ್ರಕಾಶನ
Address: 90, 'ನಾಗಸುಧೆ' ಮಹಡಿ, 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ ಹುಬ್ಬಳ್ಳಿ- 580031

Synopsys

ಪ್ರಕಾಶ ಕಡಮೆ ಅವರ ಕವಿತೆಗಳ ಸಂಕಲನ. ಈ ಸಂಕಲನದ ಕವಿತೆಗಳ ಬಗ್ಗೆ ಬಿ. ಸುಕನ್ಯಾ ಅವರು ಹೀಗೆ ಬರೆದಿದ್ದಾರೆ.

'ಅಮ್ಮನಿಗೊಂದು ಕವಿತೆ' ಸಂಕಲನದ ಹೆಚ್ಚಿನ ಕವಿತೆಗಳಲ್ಲಿನ ಆರ್ದ್ರತೆ ಹೃದಯಂಗಮವಾಗಿದೆ. 'ಚಿಂದಿ ಹೆಂಗಸಿನ ಪಾಡುಪಾಡು' ನಿಂದ ಹಿಡಿದು ಜ್ವರದಿಂದ ನರಳುವ ಕೋಳಿಯವರೆಗೂ ಪ್ರತಿಯೊಂದು ನೊಂದ ಜೀವಕೆ ಸ್ಪಂದಿಸುವ ಹೃದಯ ಇಲ್ಲಿ ಗೋಚರಿಸುತ್ತದೆ. ಯಾಂತ್ರಿಕ ಯುಗದ ದುರಂತಗಳೂ ರಾಜಕೀಯ ಮುಖವಾಡಗಳೂ ಸಾಮಾಜಿಕ ವಿಡಂಬನೆ, ತಾಯ್ನೆಲದ ಉತ್ಕಕ ಪ್ರೀತಿ, ಮುಂತಾದ ವಸ್ತು ವೈವಿಧ್ಯತೆ ಇಲ್ಲಿದೆ. ಒಟ್ಟಿನಲ್ಲಿ ಜೀವಪರ ಧೋರಣೆ ಸ್ಥಾಯಿಯಾಗಿದೆ. ಬರಿ ಕವಿತೆ ಬರೆದರೆ ಸಾಲದು, ಮನುಷ್ಯರಾಗಿ ಬರೆಯಬೇಕು ಎಂಬ ಸಂದೇಶ ಇಲ್ಲಿ ವ್ಯಕ್ತವಾಗುತ್ತದೆ. ಬಹಳ ದಿನಗಳ ನಂತರ ಒಳ್ಳೆಯ ಕವಿತೆಗಳನ್ನು ಓದಿದಂತಾಗಿದೆ. ಇಂಥ ಜೀವನ್ಮುಖಿ ತುಡಿತಗಳು ಅಂದಿನ ವಾಪಾರೀ ದೃಷ್ಟಿಕೋನ ಹೊಂದಿದ ಕಾರ್ಪೋರೇಟ್ ಜಗತ್ತು ಕ್ಷಮಿಸಿದ ಹತಾಶ ಸಮುದಾಯಕ್ಕೆ ಚೈತನ್ಯದಾಯಕವಾಗುತ್ತದೆ. 

About the Author

ಪ್ರಕಾಶ ಕಡಮೆ

ಕವಿ, ಬರಹಗಾರ ಪ್ರಕಾಶ್ ಕಡಮೆ ಅವರು ಗೋಕರ್ಣ ಸಮೀಪದ ಬಂಕಿಕೊಡ್ಲ ಹತ್ತಿರದ ಕಡಮೆ ಗ್ರಾಮದವರು. 1958ರಲ್ಲಿ ಜನಿಸಿದರು. ಹೈಸ್ಕೂಲ್ ಹಂತದಿಂದಲೇ ಬರವಣಿಗೆಯಲ್ಲಿ ಆಸಕ್ತಿ. ಅವರಿಗೆ ಸ್ಫೂರ್ತಿಯಾಗಿದ್ದವರು ಕವಿ ಸು. ರಂ. ಎಕ್ಕುಂಡಿ. ಬಾಲ್ಯದಿಂದಲೇ ಅಕ್ಷರ ಲೋಕದ ಮೂಲಕ ತಾನು ಬದುಕಬೇಕು ಎಂದು ಕನಸು ಕಂಡವರು. ಲೆಕ್ಕ ಪತ್ರ ಇಲಾಖೆ ಕೆಲಸ ನಿರ್ವಹಿಸಿದ್ದು, ಕರ್ನಾಟಕ ನೀರಾವರಿ ನಿಗಮದಲ್ಲಿಯೂ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ’ಗಾಣದೆತ್ತು ಮತ್ತು ತೆಂಗಿನಮರ (1987), ಆ ಹುಡುಗಿ (1997) ಹಾಗೂ ಅಮ್ಮನಿಗೊಂದು ಕವಿತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ’ಪರಿಮಳದಂಗಳ ಮತ್ತು ದಾಂಪತ್ಯ ನಿಷ್ಠೆ -ಪರಿಕಲ್ಪನೆ ಬದಲಾಗುತ್ತಿದೆಯೇ? ...

READ MORE

Related Books