ನೆನಪುಗಳೇ ಹಾಗೆ

Author : ಎಂ.ವಿ. ಶಶಿಭೂಷಣ ರಾಜು

Pages 176

₹ 160.00
Year of Publication: 2022
Published by: ಯದುನಂದನ ಪ್ರಕಾಶನ
Address: ಚನ್ನರಾಯ ಪಟ್ಟಣ

Synopsys

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರ ಕವನ ಸಂಕಲನ ನೆನಪುಗಳೇ ಹಾಗೆ. ಒಟ್ಟು 78 ಕವನಗಳು ಈ ಕವನ ಸಂಕಲನದಲ್ಲಿದೆ. ನೆನೆಪುಗಳೇ ಹಾಗೆ ಕವಿತೆಯಲ್ಲಿ,ನೆನಪುಗಳು ಮಾನವರ ಮನೋ ಭೂಮಿಕೆಗೆ ಆಳದಲ್ಲಿ ಕುಳಿತು ತಮ್ಮ ಬುತ್ತಿಯನ್ನು ಬಿಚ್ಚುವಂತೆ, ಸಿದ್ದವಾಗಿರುವ ಸಿಹಿ ಕಹಿ ಒಗರುಗಳ ರುಚಿಯನ್ನು ಸವಿಯುವುದಂತೆ. ಕಳೆದ ಘಟನೆಗಳು ಬಗೆ ಬಗೆಯ ವೇಷ ತೊಟ್ಟು ಕಾಣಿಸುವವು. ಜೊತೆಗೆ ಮನವ ಕಾದಾಡಿ ಬಗ್ಗಡ ಮಾಡುವವು. ಕಹಿ ನೆನಪು ಮಣಭಾರ, ಸಿಹಿನೆನಪು ಬಲು ಹಗುರವಂತೆ ಇದು ಅನುಭವ ಜನ್ಯವಾಣಿ. ಕೊನೆಗೆ ಇರಲಿ ಜೊತೆಯಾಗಿ ಅಳಿದವರ ನೆನಪು ಉಳಿದವರ ನೆನಪು ಎನ್ನುತ್ತಾರೆ. ಕವಿ ಮನಶಾಸ್ತ್ರಜ್ಞ ನಂತೆ ನೆನೆಪುಗಳ ಬಗ್ಗೆ ಚಿಂತನ ಲಹರಿ ಹರಿಯ ಬಿಟ್ಟಿದ್ದಾರೆ.ಕಾವ್ಯ ಕ್ಷಾಮ, ಜೀವಿಸುವ ಪರಿ, ಬಾಳಪಥಕ್ಕೆ, ಮನದಾವಸ್ಥೆ, ಸ್ವಾತಂತ್ರ‍್ಯ, ಇರಬಹದು, ಓಡುತ್ತಲೇ ಇರುವೆ, ಮುಂತಾದ ಕವಿತೆಗಳು ಮತ್ತೆ ಮತ್ತೆ ಓದುವಂತಿವೆ. ಕವಿಯ ಚಿಂತನೆಗೆ ಉತ್ತಮ ಸೋದಾಹರಣವಾಗಿದೆ.

About the Author

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ. ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್, ...

READ MORE

Related Books