ಸಮಗ್ರ ಕವನಗಳು

Author : ವಿ.ಗಣೇಶ್‌

Pages 264

₹ 220.00




Year of Publication: 2022
Published by: ನಿವೇದಿತ ಪ್ರಕಾಶನ
Address: ನಂ.3437 , 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತೀ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 9448733323

Synopsys

‘ಸಮಗ್ರ ಕವನಗಳು’ ವಿ. ಗಣೇಶ್‌ ಅವರ ಕವನಸಂಕಲವಾಗಿದೆ. ಇಲ್ಲಿನ ಕವನಗಳು ತಮ್ಮ ಸುತ್ತ ಘಟಿಸುವ ಘಟನೆಗಳನ್ನ ತೆರೆದ ಕಣ್ಣುಗಳಿಂದ ವೀಕ್ಷಿಸುತ್ತಾ, ಸುತ್ತಲಿನ ಪ್ರಕೃತಿಯ ಸೊಬಗು ನೀಡುವ ಆನಂದಾನುಭೂತಿಗೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಕಾವೋತ್ಸಾಹ ವನ್ನು ಪಡೆಯುವ ಈ ಕವಿಯ ಕವಿತೆಗಳು ಶ್ರಮಪಟ್ಟು ಅರ್ಥೈಸಬೇಕಾದ, ಅಥವಾ ವ್ಯಾಖ್ಯಾನವನ್ನು ಬಯಸುವ ಕವಿತೆಗಳಲ್ಲ. ನೇರಾಭಿವ್ಯಕ್ತಿಯ ಈ ಕವಿತೆಗಳು ಓದುಗರ ಒಳಗನ್ನು ಹೊಕ್ಕು ಸ್ಪಂದನವನ್ನುಂಟು ಮಾಡುತ್ತವೆ. ಅನಂತ ಚೇತನದ ಅಸ್ತಿತ್ವದಲ್ಲಿ ನಂಬುಗೆ, ಮಾನವೀಯ ಮೌಲ್ಯಗಳಲ್ಲಿ ವಿಶ್ವಾಸ, ಅಂತಃಶಕ್ತಿಯ ಅರಿವು, ಪ್ರಣಯದ ನವಿರು ಭಾವ ಈ ಕವಿಯ ಕವಿತೆಗಳ ಮೂಲದ್ರವ್ಯ. ಬದುಕನೇ ಕಾವ್ಯವಾಗಿಸಿ ಕೊಂಡಿರುವ ಗಣೇಶ್‌ರ ಕಾವ್ಯಗಳ ಅಧ್ಯಯನಕ್ಕೆ ಈ ಸಂಗ್ರಹ ಒಂದು ಗ್ರಂಥವಾಗಿದೆ. ಮೇಗರವಳ್ಳಿ ರಮೇಶ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books