ಟ್ಯ್ರಾಕುಗಳ ಮೇಲೆ ಹುಣ್ಣಿಮೆ

Author : ಬಿ.ಎನ್. ಮಲ್ಲೇಶ್

Pages 72

₹ 60.00
Year of Publication: 2009
Published by: ಪ್ರಗತಿ ಗಾಫಿಕ್ಸ್ ಪ್ರಕಾಶನ
Address: ಡಾ. ಎಂ. ಭೈರೇಗೌಡ, #119, 3ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಹಂಪಿನಗರ, ಆರ್.ಪಿ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560 104
Phone: 08023409512

Synopsys

ಲೇಖಕ ಬಿ.ಎನ್. ಮಲ್ಲೇಶ್ ಅವರ ಕವನ ಸಂಕಲನ-ಟ್ಯ್ರಾಕುಗಳ ಮೇಲೆ ಹುಣ್ಣಿಮೆ. ಲೇಖಕರ (2009) ಎರಡನೇ ಕವನ ಸಂಕಲನ. 37 ಕವಿತೆಗಳನ್ನು ಒಳಗೊಂಡಿದೆ. ರಾಜ್ಯದ ವಿವಿಧ  ದಿನಪತ್ರಿಕೆಗಳಲ್ಲಿ ಪ್ರಕಟಿತ ಕವನಗಳನ್ನು ಸಂಕಲಿಸಲಾಗಿದೆ.ಬಂಡಾಯ ಮಾತ್ರವಲ್ಲ; ಕವಿಯ ಕಲ್ಪನಾ ಪರಿಧಿಗೆ ಬಂದ ಎಲ್ಲ ವಿಷಯ ವಸ್ತುಗಳು ಇಲ್ಲಿಯ ಕವಿತೆಗಳ ಜೀವಾಳವಾಗಿವೆ. ಲೇಖಕ ಜೋಗಿ ಅವರು ಮುನ್ನುಡಿ ಬರೆದಿದ್ದರೆ ಕಥೆಗಾರ ನಾಗತಿಹಳ್ಳಿ ಚಂದ್ರಶೇಖರ್ ಬೆನ್ನುಡಿ ಬರೆದಿದ್ದಾರೆ. ಕೃತಿ ಬಿಡುಗಡೆ ಮಾಡಿದ ಕಾದಂಬರಿಕಾರ ಕುಂವೀ ಅವರು ಈ ಕವಿತೆಗಳನ್ನು ವಿಶ್ಲೇಷಿಸಿ, ಪ್ಯೂರ್ ಪೊಯಟ್ರಿಯೂ ಇದೆ, ಅಪ್ಲಯಿಡ್ ಪೊಯಟ್ರಿಯೂ ಇದೆ ಎಂದು ಪ್ರಶಂಸಿಸಿದ್ದರು. 

About the Author

ಬಿ.ಎನ್. ಮಲ್ಲೇಶ್

ಲೇಖಕ ಬಿ.ಎನ್. ಮಲ್ಲೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಬಡಗರಹಳ್ಳಿ ಗ್ರಾಮದವರು. ಆದರೆ, ದಾವಣಗೆರೆಯಲ್ಲಿ ವಾಸ. ವೃತ್ತಿಯಿಂದ ಪತ್ರಕರ್ತರು. ಎಂ.ಎ. ಎಲ್.ಎಲ್.ಬಿ ಪದವೀಧರರು. ದಾವಣಗೆರೆ ನಗರವಾಣಿ ದಿನಪತ್ರಿಕೆಯ ಸಹ ಸಂಪಾದಕರು. ಉದಯ ಟಿವಿಯ ಜಿಲ್ಲಾ (1998-2018) ವರದಿಗಾರರು. ದಾವಣಗೆರೆ ವಿಶ್ವವಿದ್ಯಾಲಯದ ಅಕಾಡೆಮಿ ಕೌನ್ಸಿಲ್ ಸದಸ್ಯರು.  ಕೃತಿಗಳು: ಬ್ರೇಕಿಂಗ್ ನ್ಯೂಸ್  (ವಿಡಂಬನೆ) ಮತ್ತು ತೆಪರೇಸಿ ರಿಟರ್ನ್ಸ್ (ವಿಡಂಬನಾತ್ಮಕ ಬರಹಗಳು)  ಬೇರು ಒಣಗಿದೆ ಪ್ರೀತಿ ಮತ್ತು ಟ್ರ್ಯಾಕುಗಳ ಮೇಲೆ ಹುಣ್ಣಿಮೆ ( ಕವನ ಸಂಕಲನಗಳು ) ಪ್ರಶಸ್ತಿ-ಗೌರವಗಳು: ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಗುಲಬರ್ಗಾದ ಅಮ್ಮ ಪ್ರಶಸ್ತಿ, ದಾವಣಗೆರೆಯಲ್ಲಿ ಮಹಾಲಿಂಗರಂಗ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.    ...

READ MORE

Related Books