ಉರಿಯ ಪೇಟೆಯಲಿ ಪತಂಗ ಮಾರಾಟ

Author : ರಾಮಕೃಷ್ಣ ಸುಗತ

Pages 98

₹ 80.00




Year of Publication: 2019
Published by: ಬಂಡಾರ ಪ್ರಕಾಶನ
Address: ಮಸ್ಕಿ,ರಾಯಚೂರು-584124
Phone: 9886407011

Synopsys

’ಉರಿಯ ಪೇಟೆಯಲಿ ಪತಂಗ ಮಾರಾಟ' ಇದು ರಾಮಕೃಷ್ಣ ಸುಗತ ಅವರ ಮೊದಲ ಕವನ ಸಂಕಲನ. ತನ್ನ ಭಾವನೆಗಳನ್ನು, ಆಲೋಚನೆಗಳನ್ನು ಕವಿತೆಯೊಳಗೆ ಇಂಗಿಸುವ ಪ್ರಯತ್ನವನ್ನು ಯುವ ಕವಿ ಈ ಮೂಲಕ ಮಾಡಿದ್ದಾರೆ.

ಮುನ್ನುಡಿಯಲ್ಲಿ ಬಂಜಗೆರೆ ಜಯಪ್ರಕಾಶ್‌ ಅವರು ಕವನ ಸಂಕಲನದ ಬಗ್ಗೆ ’ಉರಿ ಮತ್ತು ಪತಂಗಗಳು ಸಾಕಷ್ಟು ಪ್ರಾಚೀನ ರೂಪಕಗಳಾದರೂ ಪೇಟೆ ಮತ್ತು ಮಾರಾಟ ನಮ್ಮ ದಿನಮಾನದ ವಿದ್ಯಮಾನಗಳು. ಹಾಗಾಗಿ ಅವುಗಳ ಸಂಯೋಜನೆಯಿಂದ ಹುಟ್ಟುವ ಅರ್ಥ ವರ್ತಮಾನದಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಹೊಸದಾಗಿ ಬರೆಯುವಯುವಕರು ಈ ರೀತಿಯಾಗಿ ಕಾವ್ಯವನ್ನು ಅನುಸಂಧಾನ ಮಾಡುವುದು ಒಂದು ಮುಖ್ಯ ಕೆಲಸ, ದಿನಮಾನವನ್ನು ಹೊರತುಪಡಿಸಿ ನಾವು ನಮ್ಮ ಉಕ್ಕಿ ಕ್ರಮವನ್ನು ಬೆಳೆಸಿಕೊಂಡರೆ ಹೆಚ್ಚು ಉಪಯೋಗವಿಲ್ಲ. ಉಪಯೋಗ ಎನ್ನುವ ಮಾತನ್ನು ನಾನು ಕಾವೋಪಯೋಗದಅರ್ಥದಲ್ಲಿಯೇ ಹೇಳುತ್ತಿದ್ದೇನೆ. ಕವಿಯಾದವನು ತನ್ನಗತದಿಂದ ಪಡೆದುದನ್ನು ತನ್ನ ವರ್ತಮಾನದ ಕುಲುಮೆಯೊಳಗೆ ಕಾಯಿಸಿ, ಭವಿಷ್ಯತ್ತಿಗೆ ಸಾಧನ ಮಾಡಿಕೊಡಬೇಕಾದ ಕಸುಬುದಾರ. ಆತನ ಅನುಭವದ ಸೆಲೆ ಎಷ್ಟು ಹಿಂದಿನದೇ ಆಗಿರಲಿ ಅದನ್ನು ವರ್ತಮಾನದಲ್ಲಿ ಆತ ಎದುರು ಗೊಂಡಿದ್ದಾನೆ. ಹಾಗಾಗಿ ತಾನು ಅದನ್ನು ಎದುರಾದ ಘಳಿಗೆಯ ಎರಕದೊಳಕ್ಕೆ ಹೊಯ್ತು ಅದಕ್ಕೆ ಆಕಾರ ಬರಿಸಿ ಪ್ರದರ್ಶನಕ್ಕಿಡುತ್ತಾನೆ. ಕವಿತೆಗಳನ್ನು ನೋಡುವವರೂ ಕೂಡ ವರ್ತಮಾನದ ಬೆಳಕಿನಲ್ಲಿಯೇ ನೋಡುತ್ತಾರೆ.ಹಾಗಾಗಿ ಕವಿ ಸಮಕಾಲೀನಗೊಳ್ಳುತ್ತಾನೆ. ರಾಮಕೃಷ್ಣ ಸುಗತ ಆತನ ವಾರಿಗೆಯವರಿಗೆ ಸಮಕಾಲೀನನಾಗಿ ಬರೆಯುವುದು ಬಹಳ ಮುಖ್ಯ’ ಎನಿಸುತ್ತದೆ ಎಂದಿದ್ದಾರೆ. ಇದು ಯುವ ಕವಿಯ ಪ್ರಬುದ್ಧ ಬರವಣಿಗೆ ಶೈಲಿ ಕುರಿತು ತಿಳಿಸುತ್ತದೆ.

About the Author

ರಾಮಕೃಷ್ಣ ಸುಗತ
(04 November 1991)

ಯುವ ಬರಹಗಾರ ರಾಮಕೃಷ್ಣ ಸುಗತ ಅವರು ಜನಿಸಿದ್ದು 1991 ನವೆಂಬರ್‌ 4ರಂದು. ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದಿರುವ ಇವರಿಗೆ ಪ್ರವಾಸ , ಕತೆ ಕವನ ಬರೆಯುವುದು, ಹಾಡುಗಳ ರಾಗ ಸಂಯೋಜನೆ, ಕಿರುಚಿತ್ರ ನಿರ್ಮಾಣ ಹವ್ಯಾಸಿ ಕ್ಷೇತ್ರ. ಉರಿಯ ಪೇಟೆಯಲಿ ಪತಂಗ ಮಾರಾಟ ಇವರ ಚೊಚ್ಚಲ ಕವನ ಸಂಕಲನವಾಗಿದೆ.  ...

READ MORE

Related Books