ಸಾಲು

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 96

₹ 120.00
Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಸಾಲು’ ಸ್ವಂತಕ್ಕೆ ಬರೆದ ಪದ್ಯಗಳು ಜೋಗಿ ಅವರ ಕವನಸಂಕಲನವಾಗಿದೆ. ಜೋಗಿ ಅವರು ಈ ಕೃತಿಯ ಬೆನ್ನುಡಿಯಲ್ಲಿ ಹೀಗೆ ಕವನಗಳ ಕುರಿತು ಹೀಗೆ ಹೇಳುತ್ತಾರೆ; ನನಗೆ ಕವಿತೆಗಳೆಂದರೆ ಪ್ರಾಣ. ಅರ್ಥವಾಗದ ಕವಿತೆಗಳೆಂದರೆ ಅತೀವ ಅಕ್ಕರೆ. ಒಂದು ಜನ್ಮ ಕಳೆಯಲಿಕ್ಕೆ ಪೂರ್ತಿ ಅರ್ಥವಾಗುವ ನಾಲ್ಕೈದು ಕವಿತೆಗಳು ಸಿಕ್ಕರೂ ಸಾಕು. ಅರ್ಥ ಹುಡುಕುತ್ತಾ ಇದ್ದು ಬಿಡಬಹುದು. ಕವಿತೆಯ ಅನುರಾಗಿ ಆಗಿದ್ದರಿಂದಲೇ ನಾನು ಕವನ ಬರೆಯಬಾರದು ಅಂದುಕೊಂಡಿದ್ದೆ. ಆದರೆ ಕೆಲವೊಮ್ಮೆ ನಮ್ಮ ಕೈಮೀರಿ ತಪ್ಪುಗಳು ನಡೆದುಹೋಗುತ್ತದೆ. ಅಂಥ ಆಕಸ್ಮಿಕ ಅಪಘಾತಗಳ ಫಲ ಈ ಪುಸ್ತಕದಲ್ಲಿದೆ. ಕವಿತೆಗಳನ್ನು ಬರೆದ ತಕ್ಷಣ ಕವಿಯಾದೆ ಅಂದುಕೊಳ್ಳಬಾರದು ಎಂಬ ಪಾಠವನ್ನು ಕೂಡ ಕವಿತೆಯೇ ನನಗೆ ಕಲಿಸಿದೆ. ಹೀಗಾಗಿ ಇವನ್ನು ನಾನು ನನ್ನ ಅಭ್ಯಾಸದ ಪುಟಗಳೆಂದೇ ಭಾವಿಸಿದ್ದೇನೆ. ಕವಿತೆಯ ಜತೆಗಿನ ಐವತ್ತು ವರುಷಗಳ ಅನುಸಂಧಾನದಲ್ಲಿ ನನ್ನನ್ನು ಕಂಗೆಡಿಸಿದ, ಕಾಪಾಡಿದ ಸಂಕಟದ ಕ್ಷಣಗಳಲ್ಲಿ ಭರವಸೆಯ ಬೆಳಕು ಕೊಟ್ಟ ನೂರಾರು ಕವಿತೆಗಳು ಈಗಲೂ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿವೆ ಎಂದಿದ್ದಾರೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books