ತುತ್ತೂರಿ

Author : ಪಂಚಾಕ್ಷರಿ ಹಿರೇಮಠ

Pages 83

₹ 0.00
Year of Publication: 1937
Published by: ಚನ್ನಬಸಯ್ಯ ಸ್ವಾಮಿ ವಿರೂಪಾಕ್ಷಯ್ಯ ಹಿರೇಮಠ
Address: ಕರ್ನಾಟಕ ಬಂಧು, ಪ್ರಿಂಟಗ್ ಪ್ರೆಸ್, ಗದಗ.

Synopsys

ಡಾ. ಪಂಚಾಕ್ಷರಿ ಹಿರೇಮಠ ಅವರ ಕವನ ಸಂಕಲನ-ತುತೂರಿ. ಸಹಜ ಶಬ್ದ ರಚನೆ, ತಡೆದು ನಿಲ್ಲದ ಕಾವ್ಯದ ಓಘ, ವಿಚಾರದ ಹೊಳಪಿನಿಂದ ಈ ಕವಿಯ ಪುಟ್ಟ ಪುಟ್ಟ ಕವಿತೆಗಳು ಹಲವು ಸ್ಥಳಗಳಲ್ಲಿ ಹೃದಯಂಗಮವಾಗಿವೆ ಎಂದು ಪ್ರಶಂಸಿಸಿ ಕವನ ಸಂಕಲನಕ್ಕೆ ಮುನ್ನುಡಿ ಬರೆದಿರುವ ಹಿರಿಯ ಸಾಹಿತಿ ಗು.ಭೀ. ಜೋಷಿ, ‘ಹಲಕೆಲವು ಕಾವ್ಯಗಳು ಮಾತ್ರ ಸಂಖ್ಯಾ ಪೂರ್ತಿಯೊಂದನ್ನು ಬಿಟ್ಟು ಉಳಿದ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದೂ ಕವಿಯ ಕಿವಿ ಹಿಂಡಿದ್ದಾರೆ. ಸಂಕಲನದಲ್ಲಿ ಒಟ್ಟು 30 ಕವನಗಳಿವೆ.

About the Author

ಪಂಚಾಕ್ಷರಿ ಹಿರೇಮಠ
(06 January 1933)

ಪಂಚಾಕ್ಷರಿ ಹಿರೇಮಠ ಅವರು 1933ರ ಜನೆವರಿ 6 ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಜನಿಸಿದರು. ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. 2 ವರ್ಷದವರಿದ್ದಾಗ ಪಂಚಾಕ್ಷರಿ ತಮ್ಮ ತಂದೆಯನ್ನು ಕಳೆದುಕೊಂಡರು.  ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ  ಹೈ-ಕ ವಿಮೋಚನಾ ಚಳವಳಿ ಆರಂಭವಾಗಿತ್ತು. ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಅವರು ಕೊಪ್ಪಳ, ಕಲಬುರಗಿ ಸುತ್ತಾಡಿ ಕೊನೆಗೆ ಧಾರವಾಡಕ್ಕೆ ಬಂದರು. ಅವರು ಸ್ವಾಧ್ಯಾಯ ಬಲದಿಂದಲೇ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ...

READ MORE

Related Books