ಬೆಳಕಿನ ಹಾಡುಗಳು

Author : ಲಕ್ಷ್ಮಿ ಮುದೇನೂರು



Year of Publication: 2022
Published by: ಬೆರಗು ಪ್ರಕಾಶನ
Address: ಕಡಣಿ, ಆಲಮೇಲ ತಾಲೂಕು, ವಿಜಯಪುರ- 562135

Synopsys

ಲೇಖಕಿ ಲಕ್ಷ್ಮಿ ಮುದೇನೂರು ಅವರ ಕವನ ಸಂಕಲನ ಕೃತಿ ʻಬೆಳಕಿನ ಹಾಡುಗಳುʼ. ಪುಸ್ತಕದ ಬೆನ್ನುಡಿಯಲ್ಲಿ ಎಚ್.ಟಿ. ಪೋತೆ ಅವರು, “ಒಂದು ಸಾಹಿತ್ಯ ಸಮೃದ್ಧವೂ, ಪ್ರಬುದ್ಧವೂ ಆಗಿ ಬೆಳೆಯಬೇಕಾದರೆ ಅನುಭವಿಕ, ಭಾಷಿಕ ಭಾವನೆಗಳಿಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಅನನ್ಯತೆಯನ್ನು ಬೆರೆಸಿ ಮೂಡಿಸುವಂತಹದ್ದಾಗಿರಬೇಕು. ಈ ಎಲ್ಲವು ಲಕ್ಷ್ಮಿ ಮುದೇನೂರು ಅವರ ಕವಿತೆಗಳು ಧ್ವನಿಸುತ್ತವೆ. ಕವಯಿತ್ರಿ ತಾವು ಸಂಸಾರಿಕ ಜೀವನದಲ್ಲಿ ಕಂಡುಂಡ ಅನುಭವಗಳು, ನೋವು-ನಲಿವು, ಸಂಕಷ್ಟ, ತಲ್ಲಣಗಳನ್ನು ಅಕ್ಷರ ರೂಪಕ್ಕೆ ಇಳಿಸುತ್ತಾರೆ. ಈಗ ಜಾಗತೀಕರಣ ಯುಗದಲ್ಲಿದ್ದೇವೆ. ಈ ಹೊತ್ತಿನಲ್ಲಿ ಮಾನವೀಯ ಸಂಬಂಧಗಳು ವ್ಯವಹಾರೀಕರಣಗೊಂಡಿವೆ. ಇಲ್ಲಿನ ಎಲ್ಲ ತಲ್ಲಣಗಳಿಗೆ ಹೊಸ ಆಯಾಮ ನೀಡುವ ದೆಸೆಯಲ್ಲಿ ಸಹಜ, ಸ್ಫೂರ್ತಿಯಿಂದ ರಚನೆಗೊಂಡ ಅನೇಕ ಮೌಲಿಕ ವಿಚಾರ-ಚಿಂತನೆಗಳು ಬೆಳಕಿನ ಹಾಡುಗಳಲ್ಲಿ ರೂಪಕಗಳಾಗಿವೆ. ಈ ಕವನ ಸಂಕಲನದಲ್ಲಿನ ನಲವತ್ತೇಳು ಕವಿತೆಗಳು ಒಂದೊಂದು ಅನುಭವ, ಚಿಂತನೆ, ನೋಟ, ಪ್ರೀತಿ, ಮಮತೆ, ವಾತ್ಸಲ್ಯ, ಕಾಳಜಿ ಮತ್ತು ಸಹೃದಯಿತನ ತೋರುವಂತಿವೆ. ಅಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ; ಹರಿಯುವ ನೀರೆಲ್ಲವೂ ತೀರ್ಥ' ಎಂಬ ಕುವೆಂಪು ಅವರ ಸಾಲುಗಳು ಇವರ ಹೃದಯಾಂತರಾಳದ ಬಂಡಾಯದ ಧ್ವನಿ ಧ್ವನಿಸುವಂತಿವೆ. ಸಂಸಾರವೆಂಬ ನೆನಪಿನ ಪುಟದಲ್ಲಿ ಏನೆಲ್ಲಾ ಘಟನೆಗಳು ಸಂಭವಿಸಿ ಅವಾಂತರಕ್ಕೀಡು ಮಾಡುತ್ತವೆ ಎಂಬುದಿಲ್ಲಿ ದಟ್ಟವಾಗಿ ಮೂಡಿಬಂದಿವೆ. ಕೋವಿಡ್ ಕಾಲಘಟ್ಟದಲ್ಲಿ ನಡೆದ ಸಾವು-ನೋವು, ಅನಾಥ ಪ್ರಜ್ಞೆ ಭಯ ಭೀತಿ, ಆಕ್ರೋಶ, ಅಸಹಾಯಕತೆ ಮತ್ತು ಆಸ್ಪತ್ರೆಗಳಲ್ಲಿನ ರೋದನೆ, ಹೃದಯ ಕಲಕುವಂತಹ ಸಂದಿಗ್ಧ ಪರಿಸ್ಥಿತಿಯ ಅನುಭವಗಳು ಕವಿತೆಗಳಿಗೆ ಆಕರವಾಗಿವೆ. ಹಾಗೆಯೇ ಕವಿತೆಗಳ ಶೀರ್ಷಿಕೆಯೂ ಕೂಡ ಅತ್ಯಂತ ಸರಳ ಆಶಯಗಳನ್ನು ಹೊತ್ತು ನಿರೂಪಣೆಗೊಂಡಿವೆ. ಓದುಗರ ಭಾವನೆಗೆ ದರ್ಶನ ನೀಡುವುದರ ಜೊತೆಗೆ ಸರಳತೆ, ಪ್ರಾಮಾಣಿಕತೆ, ನಿಷ್ಠೆ, ಸಹೃದಯಿತನದ ಭಾವನೆಗಳಲ್ಲಿ ತೇಲಿಸುತ್ತಾ ಮಾರ್ಗದರ್ಶನ ನೀಡುವಂತಿವೆ” ಎಂದು ಹೇಳಿದ್ಧಾರೆ.

About the Author

ಲಕ್ಷ್ಮಿ ಮುದೇನೂರು

ವರಮಹಾಲಕ್ಷ್ಮಿ ಬಿ.ಎಂ ಇವರ ಕಾವ್ಯನಾಮ 'ಲಕ್ಷ್ಮಿ ಮುದೇನೂರು'. ಇವರು ಮೂಲತಃ ದಾವಣಗೆರೆಯವರು.ವಿಜ್ಞಾನ ವಿದ್ಯಾರ್ಥಿನಿಯಾದ ಇವರು ಸಾಹಿತ್ಯದ ಓದು,ಬರಹದಲ್ಲಿ ಆಸಕ್ತಿ.'ಇಂತಿ ನಿನ್ನ ಹಕ್ಕಿ' ಇದು ಇವರ ಚೊಚ್ಚಲ ಕವನ ಸಂಕಲನ.ಇವರು ಗೃಹಿಣಿಯಾಗಿದ್ದು ಇವರ ಮನೆಯವರಾದ ಡಾ.ನಿಂಗಪ್ಪ ಮುದೇನೂರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು. ಹಾಗಾಗಿ ಇವರು ಧಾರವಾಡದಲ್ಲಿ ವಾಸವಾಗಿದ್ದಾರೆ. ...

READ MORE

Related Books