ಜಾತ್ರೆಯಲ್ಲಿ ಶಿವ

Author : ಸವಿತಾ ನಾಗಭೂಷಣ

Pages 76

₹ 135.00
Year of Publication: 2002
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 57741
Phone: 9480280401

Synopsys

ಲೇಖಕಿ ಸವಿತಾ ನಾಗಭೂಷಣ ಅವರ ಕವನ ಸಂಕಲನ ʻಜಾತ್ರೆಯಲ್ಲಿ ಶಿವʼ. ಪುಸ್ತಕದಲ್ಲಿ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು, "ಸವಿತಾ ನಾಗಭೂಷಣ ಅವರ ಪದ್ಯಗಳ ನಿರಾಡಂಬರ ಸರಳತೆ, ಅನಿರೀಕ್ಷಿತ ಬೆಳವಣಿಗೆ ಮತ್ತು ಕೆಲವೆಡೆಯಲ್ಲಿನ ಸಾರ್ಥಕ ಮುಕ್ತಾಯ ಇವತ್ತಿನ ಕವಿಗಳಿಗೆ ಪಾಠವಾಗುವಂಥದು. ಸ್ತ್ರೀವಾದಿತ್ವದ ಉರುಬಿನಲ್ಲಿ ಬದುಕಿನ ಅನೇಕಮುಖಿ ಅನುಭವಗಳಿಗೆ ನೀವು ಎರವಾಗದಿರುವುದು ಹಾಗೂ ಆ ಅನುಭವಗಳನ್ನು ಸಂವೇದನಾತ್ಮಕವಾಗಿ ಪಡೆಯಲು ಉತ್ಸುಕರಾಗಿರುವುದು ಶ್ಲಾಘನೀಯವೆನ್ನಿಸುತ್ತದೆ. ನಮ್ಮ ಕವಯತ್ರಿಯರಲ್ಲೇ ನಿಮಗೊಂದು ವಿಶಿಷ್ಟ ಸ್ಥಾನವಿರುವುದನ್ನು ನಿಮ್ಮ ಪದ್ಯಗಳ ಮೂಲಕ ನಾನು ಗುರುತಿಸಿದ್ದೇನೆ" ಎಂದು ಹೇಳಿದ್ದಾರೆ.

About the Author

ಸವಿತಾ ನಾಗಭೂಷಣ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್‍ ...

READ MORE

Related Books