ಭಾವ ಪಲ್ಲವಿ

Author : ಆನಂದ ಸ್ವಾಮಿ ಎ.ಎಸ್

Pages 82

₹ 75.00
Year of Publication: 2022
Published by: ಹೆಕ್ಸಾಗೋನ್ ಟೆಕ್ನಾಲಜಿ
Address: ಬೆಂಗಳೂರು

Synopsys

ಕವಿ ಆನಂದ ಸ್ವಾಮಿ ಎ.ಎಸ್ ಅವರ "ಭಾವ ಪಲ್ಲವಿ" ಕೃತಿಯು ಕವನಸಂಕಲನವಾಗಿದೆ. ಈ ಕೃತಿಯನ್ನು ಓದುತ್ತ ಕವಿಯ ಕಾವ್ಯ ಪ್ರೇಮದ ತೀವ್ರತೆಯ ಅರಿವಾಗುತ್ತದೆ. ಸಂಕಲನವನ್ನು ಕವನ ಕಲರವ, ಕವಿತಾ ಸಾರ ಮತ್ತು ಹನಿಗವನಗಳು ಎಂದು ಮೂರು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಮೊದಲು ದೈವಾನುಗ್ರಹಕ್ಕೆ ಒಳಪಟ್ಟು ಮುಂದೆ ಹೋಗೋಣ ಎನ್ನುವುದು ಕವಿಯ ಮತ. ಪ್ರಥಮ ಪಂಕ್ತಿಯಲ್ಲಿ ಪೂಜಿತನಾಗುವ ಗಣಪತಿಯನ್ನು ಸ್ತುತಿಸುತ್ತ ಕವಿಯ ಕಣ್ಣು ಪ್ರಕೃತಿಯ ಆರಾಧನೆಯತ್ತ ಹೊರಳುತ್ತದೆ. "ಮುಳುಗೆದ್ದ ಸೂರ್ಯನ ಮುಗುಳ್ನಗೆಯಿಂದ ಹೊಸ ಬೆಳಕು, ಕಹಿ ಕಳೆದು, ಸಿಹಿ ಸವಿಸೋ ಹೊಸ ವರ್ಷದಿಂದ ಹೊಸ ಬದುಕು" ಎಂಬ ಧನಾತ್ಮಕ ಚಿಂತನೆಗೆ ಭಾಷ್ಯ ಬರೆಯುತ್ತಾರೆ. ಇಲ್ಲಿ ಸೂರ್ಯರಶ್ಮಿ, ಅವನ ಜಗ ಬೆಳಗುವ ಕಾಯಕವನ್ನು ತಮ್ಮ ಪ್ರೇರಣೆಯಾಗಿಟ್ಟುಕೊಳ್ಳುವ ಹಂಬಲವಿದೆ. "ಸಾಯುವ ವೇಳೆ ಗಂಗೆ, ತುಂಗೆ ಎಂದರೆ ಹೆಂಗೆ? ಕತ್ತಲಲ್ಲಿ ಕಾಮನಬಿಲ್ಲ ಕಾಣಬಯಸಿದ ಹಾಂಗೆ" "ನನಸಾಗದ ಕನಸುಗಳೆ ಚಂದ... ಕೈಗೆ ಎಟುಕಬಾರದು ಹುಣ್ಣಿಮೆ ಚಂದ್ರ.." ಎಂಬ ಸಾಲುಗಳು "ಅನುಭವ ಸಾರ" ಎಂಬ ಕವಿತೆಯ ಗಮನ ಸೆಳೆಯುವ ಸಾಲುಗಳು. ಬದುಕಿನಲ್ಲಿ ಯಾವುದಕ್ಕೂ ಎದೆಗುಂದದೆ ಬೆಳೆಯಬೇಕೆನ್ನುವ ಆಶಯ ಎದ್ದು ಕಾಣುತ್ತದೆ. "ಓಡುವ ಕಾಲದೆದುರು, ನಾ ಕುಂಟುವ ಕುದುರೆ ನಿಲ್ಲದ ನಾಳೆಗಳ ನೆನೆದು, ಬಾರದು ನಿದಿರೆ" ಎಂಬ ಮಾತುಗಳಲ್ಲಿ ಕಾಲನ ಕೈಚಳಕಕ್ಕೆ ನಮ್ಮನ್ನು ಒಪ್ಪಿಸಿಕೊಳ್ಳುವ ಅನಿವಾರ್ಯತೆಯ ಬಿನ್ನಹವಿದೆ. ಇಂದಿನ ಯುಗದ ನಿರಂತರ ಓಟದ, ಒತ್ತಡದ ಬದುಕಿನ ಚಿತ್ರಣವಿದೆ. "ಕಂಬನಿ ದನಿ"ಯೆನ್ನುವ ಕವಿತೆ ಒಳದನಿಯನ್ನು, ನೋವನ್ನು ಮತ್ತು ನಿರಾಸೆಯನ್ನು "ಆಡದೆ ಉಳಿದ ಮಾತುಗಳು ಮನಮುಟ್ಟದ ಭಾವಗೀತೆ ಜೀವಂತಿಸದ ಕ್ಷಣಗಳು ಕೊಲ್ಲುವವು ಮತ್ತೆ ಮತ್ತೆ " ಎನ್ನುವ ಭಾವತೀವ್ರತೆಯನ್ನು ವ್ಯಕ್ತಪಡಿಸುತ್ತವೆ.

About the Author

ಆನಂದ ಸ್ವಾಮಿ ಎ.ಎಸ್

ಕವಿ ಆನಂದ ಸ್ವಾಮಿ ಎ.ಎಸ್ ಅವರು ವೃತ್ತಿಯಲ್ಲಿ ಇಂಜಿನಿಯರ್. ಕಿರು ಚಿತ್ರ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕಾವ್ಯ ಬರವಣಿಗೆಯ ಪ್ರಕಾರದಲ್ಲಿ ತೊಡಗಿಸಕೊಂಡಿದ್ದಾರೆ. ಕೃತಿಗಳು: ಭಾವ ಪಲ್ಲವಿ ...

READ MORE

Related Books