ಮೌನಕಾಲ

Author : ಎನ್. ಆರ್. ರೂಪಶ್ರೀ

Pages 102

₹ 50.00




Published by: ಶ್ರೀ ಸದ್ಗುರು ಕಮಲಾನಂದ ಜ್ಞಾನ ಪ್ರಕಾಶನ
Address: ಬೆಂಗಳೂರು

Synopsys

‘ಮೌನಕಾಲ’ ಕೃತಿಯು ಕವಯತ್ರಿ  ಎನ್. ಆರ್. ರೂಪಶ್ರೀ ಅವರ ಕವನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕನಸು ಕಂಗಳಲ್ಲಿ / ತೀರ ಕಾಣುವವರೆಗೆ / ನೋಡುತ್ತಲೇ ಇದ್ದ / ಬದುಕಿಗೊಂದು / ಬಣ್ಣದ ಮಿಂಚು / ಗೋಚರಿಸಬೇಡವೇ? (ಹುಡುಗಿಗಾಗಿ) ಎಂದು ತಣ್ಣಗೆ ಪ್ರಶ್ನಿಸುತ್ತಲೇ ಕನಸು ಕಂಗಳ ಹುಡುಗಿಯರ ಸ್ಥಿತಿಯನ್ನು ಕವಯತ್ರಿ ಚಿತ್ರಿಸುತ್ತಾರೆ. ಇಂಥ ಚಿತ್ರಗಳನ್ನು ತಮ್ಮ ಕವಿತೆಗಳಲ್ಲಿ ಕೊಡುವಾಗಲೆಲ್ಲ ಅವರು ಒಂದು ಬಗೆಯ ನಿರ್ಲಿಪ್ತ ದೃಷ್ಟಿಯಿಂದ ಬದುಕನ್ನು, ಈ ಲೌಕಿಕವನ್ನು ನೋಡುತ್ತಾರೆ ಎಂಬುದು ಮುಖ್ಯವಾಗಿ ಕಾಣುತ್ತದೆ. ಅವನು ಕೈ ಹಿಡಿದಾಗಲೆಲ್ಲ / `ಅವನ‘ ನೆನಪು / ಅಲ್ಲಿ ಬೆಚ್ಚಗಿದ್ದಿದ್ದೆಲ್ಲ / ಇಲ್ಲಿ ತಣ್ಣಗೆ (ಹಸಿರ ಹೊದಿಕೆ) ಎಂದು ತೀವ್ರವಾಗಿ ಕವಿ ಬರೆಯಬಲ್ಲರು. `ವೈಯಕ್ತಿಕ ನೆಲೆಯಿಂದ ಅರ್ಥೈಸಬಹುದಾದ ಇಲ್ಲಿಯ ಮಾತುಗಳು, ಸಮೂಹ ಪ್ರಶ್ನೆಯಾಗಿ ನಿಲ್ಲುವುದು ವಿಶೇಷವಾಗಿದೆ‘ ಎನ್ನುತ್ತಾರೆ ಕವನಗಳನ್ನು ವಿಶ್ಲೇಷಿಸಿ ಮುನ್ನುಡಿ ಬರೆದಿರುವ ಕವಿ ವಿಷ್ಣುನಾಯ್ಕ.

About the Author

ಎನ್. ಆರ್. ರೂಪಶ್ರೀ

ಎನ್. ಆರ್. ರೂಪಶ್ರೀ ಅವರು 1980ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನಿಸಿದರು. ಶಿರಸಿಯ ಎಮ್.ಎಮ್.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವಿಶ್ವವಿದ್ಯಾನಿಲಯದ ಚಿನ್ನದ ಪದಕದೊಂದಿಗೆ ಪದವಿಗಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗಳಿಸಿದ ಅವರು ಪ್ರಸ್ತುತ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ.  ಫ್ರೌಢಶಾಲೆಯ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ರೂಪಶ್ರೀ ಅವರು 2006ರಲ್ಲಿ 'ಜ್ಞಾನ ಜ್ಯೋತಿ' ಆಧ್ಯಾತ್ಮಿಕ ಲೇಖನಗಳ ಸಂಕಲನವನ್ನು ಪ್ರಕಟಿಸಿದ್ದರು. 2008ರಲ್ಲಿ 'ಮೌನಕಾಲ' ಕವನ ಸಂಕಲನ ಪ್ರಕಟಿಸಿದ್ದರು. 2010ರಲ್ಲಿ 'ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು' ಕಥಾಸಂಕಲನ ಪ್ರಕಟಿಸಿದ್ದರು. ...

READ MORE

Related Books