ಸಲಸಲದ ಪಾಡು

Author : ವಿಜಯಕಾಂತ ಪಾಟೀಲ

Pages 64

₹ 22.00
Year of Publication: 2003
Published by: ಸುಮುಖ ಪ್ರಕಾಶನ
Address: ಬೆಂಗಳೂರು

Synopsys

‘ಸಲಸಲದ ಪಾಡು’ ಕವಿ ವಿಜಯಕಾಂತ ಪಾಟೀಲರ ಕವನ ಸಂಕಲನ. ಈ ಕೃತಿಯು ಪ್ರಕೃತಿಯ ಪಲ್ಲವಿಸುವಿಕೆ, ಬರದ ಬಸವಳಿಕೆ, ಹಿರಿಯ ತಲೆಮಾರಿನ ಹಳಹಳಿಕೆ, ಹೊಸ ಹರೆಯದ ಹುರುಪು ಹೊಳೆದ ಕೆರಳಿಕೆಗಳ ಸಾಹಿತ್ಯರೂಪ; ಸಾಲು ಸಾಲುಗಳ ನಡುವೆ ಮಿಂಚಿದ ಭಾವ ಗೊಂಚಲು; ಪ್ರಕೃತಿಯಂತೆ ಕವಿಯ ಚಿತ್ತ ಹರಿದಿರುವುದು ಈ ಕಾವ್ಯಗುಚ್ಛದ ಹೆಗ್ಗಳಿಕೆ. ನೆನಪು ಮತ್ತು ಗಾಯದ ಚೆಂದವೂ ಇಲ್ಲಿ ಅನುರಣನಗೊಂಡಿದೆ.

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books