ಗಂಗಾವತರಣ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 120

₹ 80.00




Year of Publication: 2008
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಬೇಂದ್ರೆಯವರ ’ಗಂಗಾವತರಣ’ದಲ್ಲಿ ಒಟ್ಟು 50 ಕವಿತೆಗಳಿವೆ. ಅವುಗಳನ್ನು ಪ್ರಾರ್ಥನೆ ಮತ್ತು ಸ್ತೋತ್ರಗಳು, ಕೌಟುಂಬಿಕ ಭಾವಗೀತೆಗಳು, ಗಣ್ಯವ್ಯಕ್ತಿ ಗೀತೆಗಳು, ದೇಶ, ಸಮಾಜ, ಪ್ರೇಮ, ಸತ್ವಸೃಷ್ಟಿ, ಅನುಭಾವ ಗೀತೆಗಳು ಎಂದು ವರ್ಗೀಕರಿಸಿದ್ದಾರೆ. ಪ್ರಾರ್ಥನೆ ಮತ್ತು ಸ್ತೋತ್ರಗಳಲ್ಲಿ ಗಂಗಾಷ್ಟಕ ಮತ್ತು ಗಂಗಾವತರಣ ಪದ್ಯವಿದೆ. ಲೇಸೆ ಕೇಳಿಸಲಿ ಕಿವಿಗೆ, ನಾಲಗೆಗೆ ಲೇಸೆ ನುಡಿದು ಬರಲಿ. ಲೇಸೆ ಕಾಣಿಸಲಿ ಕಣ್ಗೆ, ಜಗದೊಳಗೆ ಲೇಸೆ ಹಬ್ಬುತಿರಲಿ. ಲೇಸೆ ಕೈಗಳಿಂದಾಗುತಿರಲಿ, ತಾ ಬರಲಿ ಲೇಸೆ ನಡೆದು. ಲೇಸನುಂಡು,ಲೇಸುಸಿರಿ,ಇಲ್ಲಿರಲಿ ಲೇಸೆ ಮೈಯ ಪಡೆದು ಎಂದು ಪ್ರಾರ್ಥಿಸುತ್ತಾರೆ. ಬಾರೋ ಸಾಧನಕೇರಿಗೆ, ಫಜಾರಗಟ್ಟಿ ಮುಟ್ಟೋಣ ಬಾ, ಅಂಬಿಕಾತನಯದತ್ತ ಕವಿತೆಗಳು ಕೌಟುಂಬಿಕ ಭಾವಗೀತೆಗಳಾಗಿದ್ದರೆ ಬೆಳಗರೆ ಜಾನಕಮ್ಮನವರ ಕುರಿತ ’ತಂಗಿ ಜಾನಕಮ್ಮ’, ಬಿ.ಎಂ.ಶ್ರೀಯವರ ಕುರಿತ ಸಂಭಾವನೆ, ಪಂಪನಿಗೆ, ಬುದ್ದ ಕವಿತೆಗಳು ಗಣ್ಯವ್ಯಕ್ತಿ ಗೀತಗಳಾಗಿವೆ. ಒಂದೇ ಕರ್ನಾಟಕ , ಅನ್ನಯಜ್ಞ ಪ್ರಮುಖ ಕವಿತೆಗಳು ದೇಶ ಸಮಾಜ ಭಾಗದಲ್ಲಿವೆ. ಗಮ ಗಮಾಡಸ್ತಾವ ಮಲ್ಲಿಗೆ, ತಾಜಮಹಲ ಕವಿತೆಗಳು ’ಪ್ರೇಮ’ ಭಾಗದಲ್ಲಿದ್ದರೆ, ’ಬದುಕು ಮಾಯೆಯ ಮಾಟ ಮತ್ತು ಬಹು ಚರ್ಚಿತ ’ಜೋಗಿ’ ಕವಿತೆಗಳು ಸತ್ವಸೃಷ್ಟಿ ಭಾಗಗಳಲ್ಲಿವೆ. ಅನುಭಾವ ಗೀತೆಗಳ ಭಾಗದಲ್ಲಿ ಏಲಾಗೀತೆ, ಸರಸ್ವತಿ ಸೂಕ್ತ, ಅಗ್ನಿಸೂಕ್ತಗಳಿವೆ. ’ನಿಜದಲ್ಲಿ ಒಲವಿರಲಿ, ಚೆಲುವಿನಲೆ ನಲುವಿರಲಿ, ಒಳತಿನಲೆ ಒಲವಿರಲಿ ಜೀವಗಳೆಯಾ’ ಎನ್ನುವ ಕವಿ ’ಈ ನಾನು ಆ ನೀನು ಒಂದೇ ತಾನಿನ ತಾನು ತಾಳಲಯ ರಾಗಗಳ ಸಹಜ ಬರಲಿ’ ಎಂದು ಹಾಡಬಲ್ಲರು. ’ಅಂತರಂಗದ ಮೃದಂಗ ಅಂತು ತೋಮ್ ತನನ’ ಎಂದು ಆರಂಭವಾಗುವ ’ಕಣ್ಣ ಕಾಣಿಕೆ’ ಕವಿತೆಯು ’ಕತ್ತಲಲ್ಲೆ ಬೆಳಕು ಮಿಂಚಿ ಪಡೆದಿತೇಳು ಬಣ್ಣ ಮೂಕ ಮೌನ ತೂಕ ಮೀರಿ ದನಿಯ ಹುಟ್ಟಿ ಸಣ್ಣ ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ’ ಎಂದು ಹಾಡಿದ್ದಾರೆ. 1951ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ’ಗಂಗಾವತರಣ’ ಸಂಕಲನದಲ್ಲಿ 1944ರ ಮೊದಲಿನ ಕವಿತೆಗಳಿವೆ. ಪ್ರೊ ಆರ್‌.ಜಿ.ಕುಲಕರ್ಣಿಯವರು ’ಜೋಗಿಯ ನಾದಧ್ವನಿ’ ಎಂಬ ಪುಸ್ತಕದಲ್ಲಿ ’ಗಂಗಾವತರಣ ನಾದ ಮಾಧುರ್ಯ, ಬಾರೋ ಸಾಧನಕೇರಿಯಲ್ಲಿಯ ಕವಿಯ ವಾಸಸ್ಥಾನದ ವರ್ಣನೆ, ಧ್ವನಿ ಮುದ್ರಣಗೊಂಡ ಒಂದೇ ಕರ್ನಾಟಕ ಒಂದೇ, ಅನ್ನ ಯಜ್ಞದಲ್ಲಿನ ಅನ್ನದ ಬೆಲೆ- ನೆಲೆ, ಗಮ ಗಮಾಡಸ್ತಾವ ಮಲ್ಲಿಗೆ ಎಂಬುದರಲ್ಲಿ ನಾಟಕೀಯತೆ, ಜೋಗಿಯಲ್ಲಿಯ ಅದ್ಭುತ ನಿಗೂಢತೆ, ತುಂಬಿ ಪದ್ಯದಲ್ಲಿಯ ಛಂದಸ್ಸು ಮೆಚ್ಚುಗೆಗೆ ಪಾತ್ರವಾಗುತ್ತವೆ’ ಎಂದು ಹೇಳಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books