ವಿಶ್ವನ ಹಾಯ್ಕುಗಳು

Author : ವಿಶ್ವನಾಥ ಅರಬಿ

Pages 76

₹ 60.00
Year of Publication: 2022
Published by: ನುಡಿ ಪುಸ್ತಕ ಪ್ರಕಾಶನ

Synopsys

 ವಿಶ್ವನಾಥ ಬಸಪ್ಪ ಅರಬಿ ಅವರ ಹಾಯ್ಕು ಸಂಕಲನ ವಿಶ್ವನ ಹಾಯ್ಕುಗಳು . ಸಾಹಿತ್ಯದಲ್ಲಿ ವಿನೂತನವಾಗಿ ತಮ್ಮದೇ ಆದ ವಿಶೇಷ ಶೈಲಿಯಲ್ಲಿ ಹಾಯ್ಕುಗಳನ್ನು ರಚಿಸಿರುವುದು ಸಾಹಿತ್ಯಲೋಕಕ್ಕೆ ನೀಡುತ್ತಿರುವ ಒಂದು ಪ್ರೀತಿಯ ಕೊಡುಗೆಯಾಗಿದೆ. ಇವರು ತಮ್ಮ ಮನದಲ್ಲಿ ಮೂಡಿದ ಭಾವನೆಗಳನ್ನು ಮೂರು ಸಾಲಿನ ಅರ್ಥಗರ್ಭಿತ ಸಾಹಿತ್ಯ ರಚಿಸಿ ಈಗ ಅದರ ಸಂಕಲನವನ್ನು ವಿಶ್ವನ ಹಾಯ್ಕುಗಳು ಎಂಬ ಶೀರ್ಷಿಕೆಯೊಂದಿಗೆ ತಮ್ಮೆಲ್ಲರ ಪ್ರೀತಿಯ ಓದಿಗಾಗಿ ಅರ್ಪಿಸುತ್ತಿದ್ದಾರೆ. ಇಲ್ಲಿನ ಹಾಯ್ಕುಗಳು ನಿಸರ್ಗ, ಸೌಹಾರ್ದತೆ, ಜ್ಞಾನ, ಧ್ಯಾನ, ಅಧ್ಯಾತ್ಮ, ಪ್ರೀತಿ, ತಾಳ್ಮೆ, ನಿಸ್ವಾರ್ಥ, ತಂದೆ, ತಾಯಿ, ಸಮಾಜ ಮತ್ತು ದೇವರು. ಹೀಗೆ ಹಲವಾರು ವಿಷಯಗಳನ್ನು ಕುರಿತಾಗಿ ರಚಿಸಲ್ಪಟ್ಟ ಈ ಕೃತಿಯ ಬಗ್ಗೆ ಒಟ್ಟಾರೆಯಾಗಿ ಹೇಳಬೇಕೆಂದರೆ ಅತೀ ಕಡಿಮೆ ಶಬ್ದಗಳಲ್ಲಿ ಅತ್ಯಂತ ಅರ್ಥಗರ್ಭಿತ ಸಮಾಜಮುಖಿ ಸಾಹಿತ್ಯವನ್ನು ವಿಶ್ವನಾಥ ಅವರು ರಚಿಸಿದ್ದಾರೆ. 

About the Author

ವಿಶ್ವನಾಥ ಅರಬಿ
(02 May 1999)

ಲೇಖಕ ವಿಶ್ವನಾಥ ಅರಬಿ ಅವರು ಮೂಲತಃ  ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಾವೂರಿನವರು. ವಿಜಯಪುರದಲ್ಲಿ ವಾಸವಾಗಿದ್ದಾರೆ. ತಂದೆ ಬಸಪ್ಪ, ತಾಯಿ ಶಂಕ್ರಮ್ಮ, ವಿಜಯಪುರದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ, ಪಿ ಯು ಸಿ.ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ (ಅರ್ಥಶಾಸ್ತ್ರ)  ಪದವಿ ಪಡೆದರು. ಕಾಲೇಜು ಹಂತದಲ್ಲಿ ಚರ್ಚಾ ಸ್ಪರ್ಧೆ,ಭಾಷಣ ಸ್ಪರ್ಧೆ, ಆಶುಭಾಷಣ, ದೇಶ ಭಕ್ತಿ ಗೀತೆ ಹೀಗೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಹಾಗೂ 2016-2017 ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಣಕು ಯುವ ...

READ MORE

Related Books