ಗೆಳೆಯನಿಗೆ

Author : ಚಂಸು ಪಾಟೀಲ

Pages 44

₹ 12.00
Year of Publication: 1995
Published by: ಮಹಾಮನೆ ಪ್ರಕಾಶನ
Address: ನವೋದಯನಗರ, ಧಾರವಾಡ-3

Synopsys

ಚಂದ್ರಶೇಖರ ಎಸ್. ಪಾಟೀಲ (ಚಂಸು ಪಾಟೀಲ) ಅವರು ಬರೆದ ಮೊದಲ ಕವನ ಸಂಕಲನ-ಗೆಳೆಯನಿಗೆ. ಒಟ್ಟು 25 ಕವನಗಳು ಹಾಗೂ 8 ಹನಿಗವನಗಳನ್ನು ಒಳಗೊಂಡಿರುವ ಈ ಸಂಕಲನವು ನಿಸರ್ಗದ ಸೆಳೆತ, ಗೆಳೆತನದ ಗಾಢತೆಯನ್ನು ಚೆಲ್ಲುವರಿಯುತ್ತವೆ. ನವೋದಯ, ನವ್ಯ. ಬಂಡಾಯದಿಂದ ಅಂತರ ಕಾಯ್ದುಕೊಂಡಿರುವ ಕವಿತೆಗಳು ಕವಿಯ ಮಾಗಿದ ಮನಸ್ಸಿಗೆ ಕನ್ನಡಿ ಹಿಡಿಯುತ್ತವೆ. ಅವರ ಕಾವ್ಯಶ್ರದ್ಧೆಯನ್ನು ಸಾರಿ ಹೇಳುತ್ತವೆ. ಓದುಗರ ಎದೆ ತಟ್ಟುತ್ತುವೆ ಮಾತ್ರವಲ್ಲ ಎದೆಯೊಳಗೂ ಇಳಿಯುತ್ತವೆ. ಇಲ್ಲಿಯ ಕವಿತೆಗಳು ಕೇವಲ ಪ್ರಯೋಗಗಳಲ್ಲ. ಅವು ಕವಿಯ ಸತತ ಓದು, ಅನುಭವ, ಒಳನೋಟದ ಪ್ರತಿಫಲವಾಗಿ ಮೂಡಿರುವ ಭಾವರೇಖೆಗಳಾಗಿವೆ ಎಂದು ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ವಾಮನ ಬೇಂದ್ರೆ ಪ್ರಶಂಸಿಸಿದ್ದಾರೆ. 

About the Author

ಚಂಸು ಪಾಟೀಲ

ಕೃಷಿಯನ್ನೇ ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ ಚಂಸು ಪಾಟೀಲರು (ಚಂದ್ರಶೇಖರ ಸುಭಾಶಗೌಡ ಪಾಟೀಲ, ಜನನ: 1974))  ಇವರು ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವರು. ಬಿ.ಎ. ಪದವೀಧರರು. ಕೆಲವು ಕಾಲ ಸಂಯುಕ್ತ ಕರ್ನಾಟಕ, ಕ್ರಾಂತಿ ದಿನಪತ್ರಿಕೆಯಲ್ಲಿ ಹಾಗೂ ನೋಟ-ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದರು. ಕೃಷಿ ಸಮಸ್ಗೆ ಕುರಿತು ಬರೆದ ಕೃತಿ-ಬೇಸಾಯದ ಕತಿ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿ ಲಭಿಸಿದೆ. ಗೆಳೆಯನಿಗೆ (1995), ಕೆಂಪುಕಂಗಳ ಹಕ್ಕಿ ಮತ್ತದರ ಹಾಡು (2004), ಅದಕ್ಕೇ ಇರಬೇಕು (2009) -ಇವರ ಕವನ ಸಂಕಲನಗಳು. ಸದ್ಯ ಗ್ರಾಮದಲ್ಲೇ ಕೃಷಿಕರಾಗಿದ್ದು,ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾರೆ.   ...

READ MORE

Related Books