ನೀಲಿ ಚುಕ್ಕಿಯ ನೆರಳು

Author : ಮಧುರಾಣಿ ಎಚ್ ಎಸ್

Pages 80

₹ 120.00
Year of Publication: 2022
Published by: ಬಹುರೂಪಿ
Address: ನಂ.1, `ನಾಖುತಂತಿ’ ಆರ್ ಎಂ ವಿ ಸೆಕೆಂಡ್ ಸ್ಟೇಜ್, ಉಡುಪಿ ಗಾರ್ಡನ್ ಹೋಟೆಲ್ ಎದುರು , ಸಂಜಯನಗರ, ಬೆಂಗಲೂರು -560 094
Phone: 7019182729

Synopsys

ಕವಿ, ಲೇಖಕಿ ಮಧುರಾಣಿ ಎಚ್.ಎಸ್ ಅವರ ಕವನ ಸಂಕಲನ ನೀಲಿ ಚುಕ್ಕಿಯ ನೆರಳು. ಈ ಸಂಕಲನದಲ್ಲಿ ಒಟ್ಟು 40 ಕವನಗಳಿವೆ. ಪ್ರತಿಭಾ ನಂದಕುಮಾರ್ ಅವರ ಮುನ್ನುಡಿಯ ಮಾತುಗಳು ಈ ಸಂಕಲನದಲ್ಲಿದೆ.

ಎಚ್.ಎಸ್. ಶಿವಪ್ರಕಾಶ್ ಅವರು ಕೃತಿಯಲ್ಲಿ ಬರೆದಿರುವಂತೆ, ಯಾವುದೇ ಥರದ ಗಾಳಿಗಂಟಲಿಲ್ಲದೆ ಹಿತಮಿತ ಮೃದು ವಚನದಲ್ಲಿ ಈವರೆಗಿನ ಮಹಿಳಾ ಸಾಹಿತ್ಯಕ್ಕಿಂತ ಬೇರೆಯೇ ಆದ ರೀತಿಯಲ್ಲಿ ಸಹೃದಯರ ಮನಂಬುಗುವ ಬಗೆಯಲ್ಲಿ ಮಧುರಾಣಿಯವರ ಕವಿತಾ ಗುಚ್ಛವಿದೆ ಎಂಬುದಾಗಿ ಹೇಳಿದ್ದಾರೆ.

ಲೇಖಕಿ ಎಂ.ಆರ್ ಕಮಲ ಅವರು ಕರತಿಯಲ್ಲಿ ಹೇಳಿರುವಂತೆ, ಮಧುಋಆಣಿಯವರ ಕವನಗಳು ಆರ್ದ್ರವಾಗಿವೆ. ಸಹಜ, ಪ್ರಾಮಾಣಿಕ ಅಭಿವ್ಯಕ್ತಿ ಈ ಕವನಗಳ ವಿಶಿಷ್ಟತೆ ಎಂಬುದಾಗಿ ಹೇಳಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ಸಂತೆಮಾಳದ ಹಿಂದಿನ ಕಳ್ಳ ಬೆಕ್ಕುಗಳು, ಕಾಫಿ ಕಪ್ಪಿನ ಹೂಗಳು, ನಿನ್ನ ಮೀನು ನಾನಲ್ಲ, ಹುಲಿ ಚಹರೆಯವ, ರೂಪಾಂತರ, ನುಣುಪಾದ ಸಾವು, ನೀನೀಗ ಬೇಕಿತ್ತು..ಅಳತೆಗೆ ದಕ್ಕದೇ.., ವಿಷದ ಹೂಗಳು, ಹಠಮಾರಿ ಒಲವು, ತುಸು ಆಧ್ಯಾತ್ಮ, ಮೃದು ಕೆನ್ನೆ ಮತ್ತು ಗಡ್ಡ, ಕಳೇದು ಸಿಕ್ಕಬೇಕು, ತುಸು ಸುಮ್ಮನಿರು, ಮಲೆಗಿವೆಯಾ ಬುದ್ಧ…, ಅಮ್ಮ ಸೇರಿ 40 ಕವನಗಳಿವೆ.

About the Author

ಮಧುರಾಣಿ ಎಚ್ ಎಸ್
(09 December 1984)

ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಮಧುರಾಣಿ ತಮ್ಮ ಹೆಚ್ಚಿನ ವಿದ್ಯಾಭ್ಯಾಸವನ್ನು ಬೆಂಗಳೂರು ಹಾಗೂ ಮೈಸೂರಿನಲ್ಲಿ ಮುಗಿಸಿ ಮೈಸೂರು ವಿಶ್ವವಿದ್ಯಾಲಯದ ಎಂ ಎ (ಇಂಗ್ಲಿಷ್) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸ್ನಾತಕೋತ್ತರದಲ್ಲಿ ರಾಜ್ಯ ಮಟ್ಟದ ಮೂರನೇ ರ್‍ಯಾಂಕ್ ಪಡೆದ ಹಿರಿಮೆ ಇವರದ್ದು. ಸುಮಾರು 18 ವರ್ಷಗಳ ಬೋಧನಾ ಅನುಭವ. ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಮತ್ತು ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ, ಪ್ರಸ್ತುತ ಮೈಸೂರಿನ ಸರ್ಕಾರಿ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರು. ತಮ್ಮ ಹತ್ತನೇ ತರಗತಿಯಲ್ಲಿಯೇ ಚಿತ್ರದುರ್ಗದ ಸ್ಥಳೀಯ ಸಾಪ್ತಾಹಿಕವೊಂದರಲ್ಲಿ ಅಂಕಣ ಬರೆಯುತ್ತಿದ್ದ ಮಧು, ನಂತರ ವೈಯಕ್ತಿಕ ಕಾರಣಗಳಿಂದಾಗಿ ಹಲವು ವರ್ಷಗಳು ತಮ್ಮ ಆಸಕ್ತಿಯ ಕ್ಷೇತ್ರವಾದ ಬರವಣಿಗೆಯಿಂದ ...

READ MORE

Related Books