ಸಂಬೋಳಿ

Author : ಬೊಮ್ಮೇಕಲ್ಲು ವೆಂಕಟೇಶ

₹ 100.00
Year of Publication: 2021
Published by: ಬಯಲು ಪುಸ್ತಕ
Address: ಬೆಂಗಳೂರು

Synopsys

’ ಸಂಬೋಳಿ’ ಬೊಮ್ಮೇಕಲ್ಲು ವೆಂಕಟೇಶ್ ಅವರ ಹನಿಗವಿತೆಗಳಾಗಿವೆ. ಕವಿಯೇ ಹೇಳಿದಂತೆ ಇಲ್ಲಿನ ಹನಿಗವಿತೆಗಳು ಕೇವಲ ಕವಿತೆಗಳಲ್ಲ ಇವು ಶೋಷಿತ ಕತೆಗಳು ಹಾಗೂ ಸಮಾಜದ ವ್ಯಂಗಗಳನ್ನು ಬಿತ್ತರಿಸುವ ಸುದೀರ್ಘ ಕತಾನಕಗಳಾಗಿವೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಕುಪ್ಪನಹಳ್ಳಿ ಎಂ. ಭೈರಪ್ಪ ಅವರು, ‘ಸಮಕಾಲೀನ ವಿಶ್ವ-ಭಾರತದ ವಾಸ್ತವಗಳನ್ನು ಅರಿಯಬೇಕಾದ ಹೊಸ ಕಣ್ಣೋಟವನ್ನು ಲೇಖಕ ಈ ಸಂಕಲನದಲ್ಲಿ ನೀಡಿದ್ದಾರೆ. ಭಾರತವನ್ನು ಬೆಳಗುವ ದಿಸೆಯಲ್ಲಿ ಕಂಡ ಕನಸುಗಳೆಲ್ಲಾ ಇಂದು ಅಧಿಕಾರ ಕೇಂದ್ರಿತ ಹಿತಾಸಕ್ತಿಗಳಲ್ಲಿ ಕರಗಿಹೋಗಿ ತಂತಮ್ಮ ಪಕ್ಷಗಳ ಮೂಗಿನ ನೇರಕ್ಕೆ ಮೌಲ್ಯವಿವೇಚನೆ ನಡೆಯುತ್ತಿದೆ. ಜನವಿರೋಧಿ ವಿಷಬೇರುಗಳನ್ನು ಕಿತ್ತುಹಾಕುವ ಕೈಗಳಿಗೆ ಕೊರತೆಯಾಗಿ ಸಾಂಸ್ಕೃತಿಕ ಬಹುಸ್ತರಗಳಲ್ಲಿ ವಿಷಬೇರುಗಳು ಮತ್ತಷ್ಟು ಆಳವಾಗಿ ಬೇರುಬಿಟ್ಟುಕೊಳ್ಳುತ್ತಿವೆ. ಅಸ್ಮಿತೆಗಳ ಅಂತರ್ಯುದ್ಧ ಹಾಗೂ ಭಕ್ತಿಪರಾಕಾಷ್ಠೆಯ ಬಹಿರ್ಯುದ್ಧಗಳು ನಿರ್ಲಜ್ಜೆಯಿಂದ ನಡೆಯುತ್ತಿವೆ ಎಂಬುದನ್ನು ಇಲ್ಲಿ ಕವಿ ಸ್ಪಷ್ಠೀಕರಿಸುತ್ತಾರೆ. ಭಾರತವು ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿದ್ದಂತೆ ಕಾಣುತ್ತಿದ್ದರೂ ಸಾಮಾಜಿಕವಾಗಿ ಹಿಮ್ಮುಖವಾಗಿ ಚಲಿಸುವಂಥ ವಾತಾವರಣ ಸೃಷ್ಠಿಯಾಗುತ್ತಿವೆ. ಇಂತಹ ಬಹುವಾಸ್ತವ ಸಂಗತಿಗಳು ಇಲ್ಲಿನ ಹನಿಗವನಗಳಲ್ಲಿ ಸ್ಫುಟವಾಗಿ ಮೂಡಿಬಂದಿವೆ. ಒಳ-ಹೊರಗಿನ ವಿಷವಿಳಿಸುವ ಮದ್ದು- ಬುದ್ಧಿಯ ನುಡಿಗುಳಿಗೆಗಳು ಇಲ್ಲಿದೆ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಬೊಮ್ಮೇಕಲ್ಲು ವೆಂಕಟೇಶ

ಬೊಮ್ಮೇಕಲ್ಲು ವೆಂಕಟೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೊಮ್ಮೇಕಲ್ಲು ಗ್ರಾಮದವರು. ಬೊಮ್ಮೇಕಲ್ಲು, ಹುಣಸೇನಹಳ್ಳಿ, ಚಿಂತಾಮಣಿ, ಕೋಲಾರಗಳಲ್ಲಿ ಶಿಕ್ಷಣ ಪಡೆದಿದ್ದು, ಚಿಂತಾಮಣಿಯ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಕೃತಿಗಳು: ಅದೊಂದೇ ಅಂಗಿ (ಕವನ ಸಂಕಲನ -2015) ...

READ MORE

Related Books