ಜೀವ ಬಂತು ಹಾಡಿಗೆ

Author : ಬಿ. ಪೀರ್ ಬಾಷ

Pages 53

₹ 10.00
Year of Publication: 1993
Published by: ಸ್ವರಚಿತ ಕವನ ನಿವೇದನ ಬಳಗ
Address: ಹೂವಿನಹಡಗಲಿ

Synopsys

ಬಿ. ಪೀರ್ ಬಾಷ ಅವರ ಕವನ ಸಂಕಲನ ‘ಜೀವ ಬಂತು ಹಾಡಿಗೆ’. ಎಲ್ಲ ಕಾಲದಲ್ಲೂ ಧರ್ಮಾಂದತೆಯ ಸುಳಿಗಳು ಇದ್ದೇ ಇವೆ. ದೇಶವನ್ನು ಏಕಸಂಸ್ಕೃತಿಯ ಅಡಿಯಲ್ಲಿ ತರಲು ಬಹುಸಂಸ್ಕೃತಿಗಳನ್ನು ದೇಶದ ಬಹುತ್ವವನ್ನು ದಮನಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ.  ಇಂತಹ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರಾದ ಕವಿಯೊಬ್ಬ ತನ್ನ ತಲ್ಲಣಗಳನ್ನು, ನೋವು- ಅಪಮಾನಗಳನ್ನು ತನ್ನ ಕವಿತೆಗಳ ಮೂಲಕ ಹೊರ ಹಾಕಿರುವುದನ್ನು ಈ ಕೃತಿಯಲ್ಲಿ ಕಾಣಬಹುದು. 

About the Author

ಬಿ. ಪೀರ್ ಬಾಷ
(01 May 1972)

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಿ. ಪೀರ್ ಬಾಷ ಅವರು ಹುಟ್ಟಿದ್ದು 1972 ರ ಮೇ 1 ರಂದು. ತಂದೆ-  ಬಿ.ಬಾಷಾ ಸಾಹೇಬ್ ಹಾಗೂ ತಾಯಿ- ಹಯಾತ್ ಬಿ. ಸದ್ಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಾರಟಗಿಯಲ್ಲಿ ವಾಸ. ಸಾಮಾಜಿಕ ಚಟುವಟಿಕೆಯೊಂದಿಗೆ ಬರವಣಿಗೆ ರೂಢಿಸಿಕೊಂಡಿರುವ ಪೀರ್ ಬಾಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರು. ಕವನ ಸಂಕಲನಗಳು : ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ,  ಅಕ್ಕಸೀತಾ ನಿನ್ನಂತೆ ನಾನೂ, ದೇವರು ಮನುಷ್ಯರಾದ ದಿನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಮಾಡಿದ ಕೃತಿಗಳನ್ನು ಹಂಪಿಯ ಕನ್ನಡ ವಿ.ವಿ.ಪ್ರಕಟಿಸಿದೆ. ಸಮಾಜವಾದಿ ನೀಲಗಂಗಯ್ಯ ಪೂಜಾರ್ ಕುರಿತು ವ್ಯಕ್ತಿ ಚಿತ್ರಣ, ಸಂಪಾದಿತ ಕೃತಿ: ಶಿಲವೇರಿ ಶಿವಪ್ಪ ಸಂ (ತತ್ವಪದಗಳು), ...

READ MORE

Related Books