ಸಂಪರ್ಕ

Author : ಗಂಗಾಧರ ಚಿತ್ತಾಲ

Pages 41

₹ 6.00




Year of Publication: 1983
Published by: ಐಬಿಎಸ್ ಪ್ರಕಾಶನ
Address: ಐಬಿಎಸ್ ಪ್ರಕಾಶನ, ಗಾಂಧಿನಗರ, ಬೆಂಗಳೂರು-560009

Synopsys

’ಸಂಪರ್ಕ’  ಕೃತಿಯು ಕವಿ, ಸಾಹಿತಿ ಗಂಗಾಧರ ಚಿತ್ತಾಲ ಅವರ ಕವನ ಸಂಕಲನ.

ಚಿತ್ತಾಲರ ಸಂಪರ್ಕ ಕವನ ಸಂಕಲನದಲ್ಲಿ ಸೃಷ್ಟಿ ಕ್ರಮವನ್ನು ಕಾಣುವ ವಿಸ್ಮಯದ ಭಾವ ಪ್ರಕಟವಾಗಿದೆ. ಇನ್ನು ಈ ಪುಸ್ತಕಕ್ಕೆ ಕೀರ್ತಿನಾಥ ಕುರ್ತಕೋಟಿಯವರು ಮುನ್ನುಡಿ ಬರೆದಿದ್ದಾರೆ. ಅಭಿವ್ಯಕ್ತಿ ಎಂದರೆ ಅನುಭವದ ವಿಸ್ತೀರ್ಣ ಎಂದು ಪ್ರಾಮಾಣಿಕವಾಗಿ ನಂಬಿದ ಕವಿ ಗಂಗಾಧರ ಚಿತ್ತಾಲರು, ದುಃಖಗೀತ, ಹರಿವ ನೀರಿದು, ಮೊದಲಾದ ಕವಿತೆಗಳಲ್ಲಿ ದುಃಖದ ಅನುವಂಶಿಕತೆಯನ್ನು ಸಶಕ್ತವಾಗಿ ಬರೆದಿದ್ದರು. ಕಾವ್ಯಕರ್ಮ ಮೊದಲಿನಿಂದಲೂ ಗಂಗಾಧರ ಚಿತ್ತಾಲರಿಗೆ ಒಂದು ಧೀರೋದಾತ್ತವಾದ ಕ್ರಿಯೆಯಾಗಿದೆ ಎನ್ನುತ್ತಾರೆ ಕುರ್ತಕೋಟಿ.

About the Author

ಗಂಗಾಧರ ಚಿತ್ತಾಲ
(12 November 1923 - 28 January 1987)

ಕವಿ ಗಂಗಾಧರ ಚಿತ್ತಾಲ ಅವರು ಜನಿಸಿದ್ದು1923 ನವೆಂಬರ್ 12ರಂದು. ಇವರ ಹುಟ್ಟೂರು ಗೋಕರ್ಣ ಸಮೀಪದ ಹನೇನಳ್ಳಿ. ತಂದೆ ವಿಠೋಬಾ ಪುಂಡರೀಕ, ತಾಯಿ ರುಕ್ಕಿಣೀದೇವಿ ಲಂಡನ್, ಅಮೆರಿಕ ಮುಂತಾದ ದೇಶಗಳ ಪ್ರವಾಸ ಮಾಡಿದ್ದ ಅನುಭವಗಳು ಇವರು ಬರೆದಿರುವ ಪ್ರವಾಸ ಕಥನಗಳಲ್ಲಿ ಕಂಡುಬರುತ್ತವೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕಾಲದ ಕರೆ, ಮನುಕುಲದ ಹಾಡು, ಸಂಪರ್ಕ, ಹರಿವನೀರಿದು ಇತ್ಯಾದಿ. ಕನ್ನಡ ಪುಸ್ತಕ ಪ್ರಾಧಿಕಾರ ಇವರ ಕವಿತೆಗಳ ಸಮಗ್ರ ಕವಿತೆ ಸಂಕಲನ ಪ್ರಕಟಿಸಿದೆ. 1987 ಜನವರಿ 28ರಂದು ಮರಣ ಹೊಂದಿದರು. ...

READ MORE

Related Books