ಅರಬ್ಬಿ

Author : ಕೆ.ವಿ. ತಿರುಮಲೇಶ್‌

Pages 544

₹ 500.00
Year of Publication: 2015
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕೆ.ವಿ ತಿರುಮಲೇಶ್ ಕನ್ನಡದ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಬರೆಯಲು ಆರಂಭಿಸಿದವರು. ಕನ್ನಡದ ಪ್ರಮುಖ ಕವಿ ಹಾಗೂ ವಿಮರ್ಶಕರು. ಇವರು ರಚಿಸಿದ ’ಅರಬ್ಭಿ’ ಎಂಬ ಕೃತಿಯಲ್ಲಿ 250ಕ್ಕೂ ಹೆಚ್ಚು ಕವನಗಳಿವೆ. ಇಲ್ಲಿ ಕವನಗಳನ್ನು ಆಗತ ಕವಿಗಳು, ಯೆಮನ್ ಕಲ್ಯಾಣಿ, ಸನಾದ ಡೈರಿ, ಬೆಳಗಿನ ರಾಣಿ, ಅಸರ್‌ ಬೆಟ್ಟದ ಕಡೆಗೆ ಈಗೆ ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಎಲ್ಲಾ ಕವಿತೆಗಳನ್ನು ಕೆ.ವಿ ತಿರುಮಲೇಶ್  ಅವರು ಯೆಮನ್ ನಗರದಲ್ಲಿ ವಾಸವಿದ್ದ ಸಂದರ್ಭದಲ್ಲಿ ಬರೆದಂಥವುಗಳಾಗಿವೆ.

ಮನಸ್ಸು, ವಿಚಾರ, ,ಮತ್ತು ಪ್ರಜ್ಞೆಗಳ ಕುರಿತು ಮಾನವರಲ್ಲಿ ದ್ವಂದ್ವ ನಿಲುವುಗಳು ದೀರ್ಘಕಾಲದಿಂದಲೂ ಉಳಿದಿವೆ. ಮನಸ್ಸನ್ನು, ಬಾಹ್ಯ, ಅಂತರ್ಯ, ಮತ್ತು ಸುಷುಪ್ತಿ,ಹೀಗೆ ಮೂರು ವಿಧಗಳಾಗಿ ವಿಂಗಡಿಸಿ ಇಲ್ಲಿ ವಿಶ್ಲೇಷಿಸಿದ್ದಾರೆ. ಮನಸ್ಸು, ಬುದ್ದಿ, ಅಹಂಕಾರ, ಚಿತ್ತ, ಚೇತನ ಎಂದು ಮನಸ್ಸಿನ ಕಾರ್ಯವೈಖರಿಯ ಆಧಾರದ ಮೇಲೆ ವಿಂಗಡಿಸಿ ಕೃತಿಯಲ್ಲಿ ಕೊಟ್ಟಿದ್ದಾರೆ. 

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books