ಖಾಲಿ ಜೋಳಿಗೆ ಫಕೀರ

Author : ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ

Pages 106

₹ 100.00
Year of Publication: 2021
Published by: ನಂದನವನ ಪ್ರಕಾಶನ
Address: ಶ್ರೀರಾಮನಹಳ್ಳಿ, ಸಸಲು, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ರೂರಲ್ ಜಿಲ್ಲೆ-561204
Phone: 9844673976

Synopsys

‘ಖಾಲಿ ಜೋಳಿಗೆ ಫಕೀರ’ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರ ಕವನಸಂಕಲನ. ಈ ಜಗತ್ತು ಖಂಡಿತವಾಗಿ ಪ್ರಶ್ನೆಗಳನ್ನೇ ಹೊದ್ದು ಮಲಗಿದೆ. ಉತ್ತರವಿಲ್ಲದ ಪ್ರಶ್ನೆಗಳು ಪ್ರಶ್ನೆಗಳೇ ಇಲ್ಲದ ಉತ್ತರಗಳು ಬಗೆದಷ್ಟೂ ಅಗೆದಷ್ಟೂ ಜಟಿಲವಾಗುವ ಸೋಜಿಗ, ಇವೆಲ್ಲದರ ನಡುವೆ ಇನ್ನೇನು ಉತ್ತರ ಸಿಕ್ಕಿಯೇ ಬಿಟ್ಟಿತು ಅನ್ನೋ ಮನಸ್ಥಿತಿ. ಹೀಗೆ ಇವೆಲ್ಲವನ್ನು ಕವಿ ಕವನದ ವಸ್ತುವಾಗಿ ಬಳಸಿದ್ದಾರೆ.

ಕೃತಿಗೆ ಮುನ್ನುಡಿ ಬರೆದ ವಿ. ಆರ್. ಕಾರ್ಪೆಂಟರ್, ‘ಪ್ರಸ್ತುತ ಜರುಗುತ್ತಿರುವ ಜನರ ಸಂಕಟದ ನಡುವೆ ಅನೇಕ ಲೇಖಕರಿಗೆ ತಾವು ಪಡೆದುಕೊಂಡ ಪ್ರಶಸ್ತಿ, ಕೋಮುವಾದಿ ಪತ್ರಿಕೆಗಳಲ್ಲಿ ಪ್ರಕಟವಾಗುವ ತಮ್ಮ ಲಜ್ಜೆಗೆಟ್ಟ ಸಾಲುಗಳ ಬಗ್ಗೆ ತೀವ್ರವಾದ ಆಸಕ್ತಿ, ವ್ಯವಸ್ಥೆಯ ಲೋಪವನ್ನೂ ಕಿಂಚಿತ್ತೂ ಪ್ರಶ್ನಿಸದೇ ಕಾಲದ ವಶವಾಗುವ ಇಂಥವರ ನಡುವೆ ‘ಖಾಲಿ ಜೋಳಿಗೆ ಫಕೀರ’ ವಿಶಿಷ್ಟವಾಗಿ ನಿಂತು, ಲಜ್ಜೆಗೆಟ್ಟವರನ್ನು, ವಿಕೃತರನ್ನು ಅಣಕಿಸುತ್ತದೆ. ಚಿನ್ನುಪ್ರಕಾಶ ಅವರ ಪದ್ಯಗಳಲ್ಲಿ ಎಲ್ಲೂ ಪದಗಳೊಂದಿಗೆ ಚಿನ್ನಾಟವಿಲ್ಲ. ಬದಲಿಗೆ ಬದುಕಿನ ಅಂಚುಗಳನ್ನು ಹಿಗ್ಗಿಸಿ ಅದನ್ನು ಮತ್ತಷ್ಟು ಜೀವಪರವಾಗಿಸುವ, ಲೋಕರೂಢಿಯೊಳಗೆ ಬೆರೆತು ಹೋಗಿರುವ ಸುಳ್ಳಿನ ಬೇರುಗಳನ್ನು ಕಿತ್ತೆಸೆಯುವ ಗುಣಗಳಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ

ಲೇಖಕ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಶ್ರೀರಾಮನಹಳ್ಳಿಯವರು.ಎಂ.ಎ,ಎಂ.ಫಿಲ್ (ಆಂಗ್ಲ ಸಾಹಿತ್ಯ) ಪದವೀಧರರು. ಜನಪದ ಗಾಯಕ,  ರಂಗಭೂಮಿ ಕಲಾವಿದ ಮತ್ತು ‌ರಂಗ‌ನಿರ್ದೇಶಕರೂ ಆಗಿದ್ದಾರೆ. ಕೃತಿಗಳು: ಅಂತಃಪುರ ( ಕವನ ಸಂಕಲನ-2010) ನೇಸರನ ಛಾಯೆ (ಕವನ ಸಂಕಲನ -2015), ಪಡುವಣ ದಿಕ್ಕಿನಲಿ (ನಾಟಕ-2016), ನಿರ್ದೇಶಿಸಿದ ನಾಟಕಗಳು; ತಮ್ಮದೇ ನಾಟಕ ಪಡುವಣ ದಿಕ್ಕಿನಲಿ, ನಾವು ನಾಗರೀಕರು -ಅಪ್ಪ ಅಂದರೆ ಆಲದ ಮರ-ಕಂಜೂಸ್ ಕರಿಯಪ್ಪ, ಚಂಪಾ ಅವರ ಅಪ್ಪ, ಡುಂಡಿರಾಜ್ ಅವರ ಹುಡುಕಾಟ- ಪರಮೇಶಿ ಪಜೀತಿ. ಅಭಿನಯಿಸಿದ ನಾಟಕಗಳು: ಪೌರಾಣಿಕ ನಾಟಕ, ಕುರುಕ್ಷೇತ್ರ, ಪೂರ್ಣಚಂದ್ರ ತೇಜಸ್ವಿ ಅವರ ಪರಿಸರ ...

READ MORE

Related Books