ನನ್ನದಲ್ಲದ ಕವಿತೆ

Author : ಶ್ರೀನಿವಾಸ ನಾಯಕ

Pages 76

₹ 100.00
Year of Publication: 2020
Published by: ಸವಿ ಪ್ರಕಾಶನ
Address: ಬೆಂಗಳೂರು

Synopsys

ಕವಿ ಶ್ರೀನಿವಾಸ ನಾಯಕ ಅವರ ಕವನ ಸಂಕಲನ-ನನ್ನದಲ್ಲದ ಕವಿತೆ. ಒಟ್ಟು 61 ಕವಿಗಳನ್ನು ಸಂಕಲಿಸಲಾಗಿದೆ. ಸ್ವತಃ ಲೇಖಕರು ತಮ್ಮ ಪ್ರಸ್ತಾವನೆಯ ನುಡಿಯಲ್ಲಿ ‘ನಾನು ಬರೆದಿದ್ದು ಕವಿತೆಯಾ ಎನ್ನುವ ಉತ್ತರ ಗೊತ್ತಿಲ್ಲದ ಪ್ರಶ್ನೆಯನ್ನು ಜೊತೆಗಿಟ್ಟುಕೊಂಡೇ ಒಂದು ಸಂಕಲನ ಹೊರ ತರುವ ಪ್ರಯತ್ನ ಮಾಡಿದ್ದೇನೆ. ಕೆಲವು ಕವಿತೆಗಳು ರಾಗ ಸಂಯೋಜನೆ ಪಡೆದು ಭಾವಗೀತೆಗಳಾಗಿವೆ’ ಎಂದು ಕವಿತೆಗಳ ಕುರಿತು ತಮ್ಮ ಅನಿಸಿಕೆಯನ್ನು ಓದುಗರ ಮುಂದಿಟ್ಟಿದ್ದಾರೆ.  

ಸಾಹಿತಿ ಅರವಿಂದ ಚೊಕ್ಕಾಡಿ ಅವರು ಕೃತಿಗೆ ಬೆನ್ನುಡಿ ಬರೆದು ‘ಕಾವ್ಯ ಸತ್ವ ಕ್ಷೀಣವಾಗಿರುವ ಕಾಲದಲ್ಲಿ ಹೊಸ ಸಾಧ್ಯತೆಯ ಹುಡುಕಾಟದ ಲಕ್ಷಣಗಳು ಇಲ್ಲಿಯ ಕವಿತೆಗಳಲ್ಲಿವೆ. ಅಧ್ಯಯನ ಹಾಗೂ ಚಿಂತನಾ ವ್ಯಾಪ್ತಿಯನ್ನು ವಿಸ್ತರಿಸುವ ಕವನಗಳೂ ಇವೆ’  ಎಂದು ಪ್ರಶಂಸಿಸಿದ್ದಾರೆ. 

About the Author

ಶ್ರೀನಿವಾಸ ನಾಯಕ
(01 June 1980)

ಕವಿ ಶ್ರೀನಿವಾಸ ನಾಯಕ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದವರು. ಸದ್ಯ ಬೆಂಗಳುರಿನಲ್ಲಿ ವಾಸವಿದ್ದು,ಕುವೆಂಪು ವಿ.ವಿ.ಯಿಂದ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಎಂ.ಎಸ್.ಸಿ. ಪದವೀಧರರು. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಿ.  ಕವನ, ಕಥೆ, ಲೇಖನ ಬರಹದಲ್ಲಿ ಆಸಕ್ತಿ. ಬೆಂಗಳೂರು ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ. ಹಲವು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದಲ್ಲಿ "ಯುವ ಜನ ಕವಿಗೋಷ್ಟಿ"ಯ ಅಧ್ಯಕ್ಷತೆವಹಿಸಿದ್ದರು. ನನ್ನದಲ್ಲದ ಕವಿತೆ-ಎಂಬುದು ಇವರ ಮೊದಲ ಕವನ ಸಂಕಲನ.  ...

READ MORE

Related Books