ಒಸಗೆಯ ಎಸಳು

Author : ಪುಷ್ಪ ಪ್ರಸಾದ್‌

Pages 71

₹ 120.00
Year of Publication: 2023
Published by: ಹೆಚ್‌.ಎಸ್‌.ಆರ್‌ ಎ ಪ್ರಕಾಶನ
Address: ಶ್ರೀ ಅನ್ನಪೂರ್ಣೇಶ್ವರಿ ನಿಲಯ,1ನೇ ಮುಖ್ಯ ರಸ್ತೆ,ಬೈರವೇಶ್ವರ ನಗರ, ಲಗ್ಗೆರೆ ಬೆಂಗಳೂರು- 560058
Phone: 7892793054

Synopsys

‘ಒಸಗೆಯ ಎಸಳು’ ಪುಷ್ಪ ಪ್ರಸಾದ್‌ ಅವರ ಕವನಸಂಕಲನವಾಗಿದೆ. ಕವನ ಎಂದರೆ ಸದಾ ಕನವರಿಸುವಂತೆ ಮಾಡುವ ಕಲ್ಪನೆಗಳ ಒಂದು ಗುಚ್ಚವಾಗಿದೆ. ಕಲ್ಪನೆಗಳನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಅರ್ಥಗರ್ಭಿತವಾಗಿ ಓದುಗರ ಮನಸೆಳೆದು ಅವರ ಮನಸ್ಸಿನಾಳಕ್ಕೆ ಇಳಿದು ಮನಸ್ಸಿಗೆ ಮುದ ನೀಡುವ ಸರಳವಾದ ಆಕರ್ಷಣೀಯ ಬರವಣಿಗೆಯಾಗಿದೆ. ಇನ್ನು ಒಸಗೆಯ ಎಸಳು ಕವನ ಸಂಕಲನದ ಬಗ್ಗೆ ಮೊದಲ ನುಡಿಯಲ್ಲಿ ಹೇಳುವುದಾದರೆ, ಮುಖ ಪುಟದ ಶೀರ್ಷಿಕೆಯೇ ಎಷ್ಟು ಅರ್ಥಗರ್ಭಿತವೆಂದರೆ ಅಂತರಾಳದ ನೋಟವನ್ನು ಓದುಗರಿಗೆ ಉಣಬಡಿಸುವ ಒಂದು ಹೂರಣವಾಗಿದ್ದು, ಒಸಗೆ ಎಂದರೆ ಆನಂದ, ಸಂತೋಷ ಮತ್ತು ಎಸಳು ಎಂದರೆ ದಳ, ಒಸಗೆಯ ಎಸಳು ಎಂದರೆ ಆನಂದದ ಒಂದು ದಳ ಎನ್ನುವುದನ್ನು ಸಾರುತ್ತದೆ

About the Author

ಪುಷ್ಪ ಪ್ರಸಾದ್‌

ಪುಷ್ಪ ಪ್ರಸಾದ್‌ ಅವರು ಮೂಲತಃ ಮಡಿಕೇರಿಯವರು. ದೇವಪ್ಪ ಕುಂಬಾರ ಹಾಗೂ ಪೂವಮ್ಮ ರವರ ಪುತ್ರಿಯಾಗಿದ್ದಾರೆ. ತಮ್ಮ ಪ್ರಾರ್ಥಮಿಕ ಶಿಕ್ಷಣದಲೇ ಸಾಹಿತ್ಯದ ಸ್ಫೂರ್ತಿ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ ಬಿರುದುಗಳಿಗೆ ಪಾತ್ರರಾಗಿರುತ್ತಾರೆ. ...

READ MORE

Related Books