ಬೆಂಕಿಗೆ ತೊಡಿಸಿದ ಬಟ್ಟೆ

Author : ಆರಿಫ್ ರಾಜಾ

Pages 105

₹ 100.00




Year of Publication: 2013
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ವಯಾ- ಎಮ್ಮಿಗನೂರು, ಬಳ್ಳಾರಿ-583113
Phone: 9480728393

Synopsys

‘ಬೆಂಕಿಗೆ ತೊಡಿಸಿದ ಬಟ್ಟೆ’ ಆರಿಫ್ ರಾಜಾ ಅವರ ಮೂರನೇ ಕವನ ಸಂಕಲನವಾಗಿದೆ.  ಸಂವೇದನೆ ಮತ್ತು ವೈಚಾರಿಕತೆಗಳ ಮುಖಾಮುಖಿಯನ್ನು ಇವರ ಕವಿತೆಗಳ ರಚನೆಯಲ್ಲಿ ಕಾಣಬಹುದು.

ಪ್ರೇಮವನ್ನು ಭಿನ್ನ ಹುಡುಕಾಟಗಳಿಗೆ ಆವಾಹಿಸಿಕೊಳ್ಳುವ ದಾರಿಯಲ್ಲಿ ಇವರ ಕವಿತೆಗಳಿವೆ. ಹೆಣ್ಣು ಮಕ್ಕಳ ಮಾನಸಿಕ ಒಂಟಿತನ, ಅಸ್ತಿತ್ವದ ಶೋಧನೆಯನ್ನು ಇವರ ಕವಿತೆಗಳು ಮಾಡುತ್ತವೆ. ಪ್ರಜಾಪ್ರಭುತ್ವದ ಅಸ್ತಿತ್ವದ ಬಿರುಕುಗಳ ಕುರಿತು ಕವಿಗಿರುವ ನೋವು, ಆಕ್ರೋಶವೂ ಇಲ್ಲಿರುವ ರಚನೆಗಳಲ್ಲಿ ಕಾಣುತ್ತವೆ. . ಇವರ ಕವಿತೆ ಪ್ರಜಾಪ್ರಭುತ್ವದ ಬೇರುಗಳನ್ನು ಜೀವಂತಗೊಳಿಸುವ ಇರಾದೆಯನ್ನು ಉದ್ದಕ್ಕೂ ವ್ಯಕ್ತಪಡಿಸುತ್ತದೆ. ಸಾಮಾಜಿಕವಾಗಿ, ರಾಜಕೀಯವಾಗಿ ಮನುಷ್ಯ ಮೌನ ವಹಿಸುವುದನ್ನು ನಿರಾಕರಿಸುವ ಕ್ರಮವನ್ನು ಸೂಕ್ಷ್ಮವಾಗಿ ತಮ್ಮ ಕಾವ್ಯದ ಮೂಲಕ ತಿಳಿಸುತ್ತಾರೆ. 

 

About the Author

ಆರಿಫ್ ರಾಜಾ
(06 December 1983)

2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ  ಆರಿಫ್‌ ರಾಜ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರಾದರು. 1983 ಡಿಸೆಂಬರ್‌ 6ರಂದು ಜನಿಸಿದ ಅವರು ರಾಯಚೂರಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬಾಗಲಕೋಟೆಯ ಗವರ್ನಮೆಂಟ್ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್, ಇಳಕಲ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಇವರು ಬರೆದಿರುವ ಹಲವು ಕವಿತೆಗಳು ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ದಿನಕರ ದೇಸಾಯಿ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಇವರು ಅನುವಾದಿತ ಕವಿತೆಗಳು ಪರ್ಷಿಯನ್ ಭಾಷೆಯಲ್ಲಿ ರಚಿತವಾದ ಭಾರತದ ...

READ MORE

Related Books