ಗುಲಾಬಿ ಮುಳ್ಳು

Author : ರಾಜೇಂದ್ರ ಬುರಡಿಕಟ್ಟಿ

Pages 88

₹ 60.00




Year of Publication: 2014
Published by: ಅಮೃತ ಪ್ರಕಾಶನ
Address: #48, ಬಿ ಬ್ಲಾಕ್, ರತ್ನಗಿರಿ ನಗರ, ಅಬ್ಲಲಗೆರೆ ಅಂಚೆ, ಸವಳಂಗ ರಸ್ತೆ, ಶಿವಮೊಗ್ಗ- 577204

Synopsys

‘ಗುಲಾಬಿ ಮುಳ್ಳು’ ಕವಿ ಡಾ. ರಾಜೇಂದ್ರ ಬುರಡಿಕಟ್ಟಿ ಅವರ ಕವನ ಸಂಕಲನ. ಈ ಸಂಕಲನದ ಬಹುತೇಕ ಕವಿತೆಗಳು ಸಮಕಾಲೀನ ಯುಗದ ಸಾಮಾಜಿಕ ತಲ್ಲಣಗಳನ್ನು ಧ್ವನಿಸುತ್ತಾ ಅವುಗಳನ್ನು ಎದುರುಗೊಳ್ಳುವುದಕ್ಕೆ ಸುಪ್ತವಾಗಿ ಪ್ರೇರೇಪಿಸುತ್ತವೆ. ಬಲವಂತರ ಮತ್ತು ಅಧಿಕಾರಸ್ತರ ಶೋಷಣೆಯ ತಂತ್ರ-ಕುತಂತ್ರಗಳನ್ನು ನಿಷ್ಠೂರವಾಗಿ ವಿಮರ್ಶಿಸುತ್ತಲೇ ಬಲಹೀನರ ಪಕ್ಷಪಹಿಸುತ್ತವೆ. ಶೋಷಣೆ ಮತ್ತು ದಮನಗಳೇ ಪ್ರತಿರೋಧದ ಹುಟ್ಟಿಗೆ ಕಾರಣವಾಗುತ್ತದೆಂಬ ಸಾರ್ವತ್ರಿಕ ಸತ್ಯವನ್ನು ತಾತ್ವಿಕವಾಗಿ ಸಮರ್ಥಿಸುತ್ತವೆ. ಶತಮಾನಗಳುರುಳಿದರೂ ಶೋಷಣಾರಹಿತ, ಸಮಾನತೆಯ ಸಮಾಜದ ಕನಸು ನನಸಾಗದಿರುವುದಕ್ಕೆ ಮರುಗುತ್ತಲೇ ಆ ಕನಸನ್ನು ಜೀವಂತವಾಗಿಟ್ಟು ನಮ್ಮಲ್ಲಿ ಆಶಾವಾದವನ್ನು ಹುಟ್ಟಿಸುತ್ತವೆ. ಭಾರತೀಯ ಮನಸ್ಸುಗಳನ್ನು ಕದಡುತ್ತಿರುವ ಕೋಮುವಾದ, ಜಾತಿವಾದ, ಮೂಢನಂಬಿಕೆ, ಬಡತನಗಳಂತಹ ಸಮಾಜೋ-ಆರ್ಥಿಕ ಸಮಸ್ಯೆಗಳು ಕವಿಯನ್ನು ಅತೀವವಾಗಿ ಕಾಡಿದಂತೆ ಕಾಣುತ್ತವೆ.

About the Author

ರಾಜೇಂದ್ರ ಬುರಡಿಕಟ್ಟಿ
(20 June 1970)

ಕವಿ ರಾಜೇಂದ್ರ ಬುರಡಿಕಟ್ಟಿ ಅವರು 1970 ಜೂನ್ 20ರಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ ಗ್ರಾಮದಲ್ಲಿ ಜನಿಸಿದರು. ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತಮ್ಮ ಪ್ರಾರಂಭಿಕ ಶಿಕ್ಷಣ ಪೂರೈಸಿದ ಇವರು ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಿ.ಎ ಮತ್ತು ಎಂ.ಎ. ಪದವಿಗಳನ್ನು ಪಡೆದಿದ್ದಾರೆ. ಚನ್ನೈನ ಸಂಸ್ಥೆಯೊಂದರಿಂದ ಕುಟುಂಬ ಜೀವನ ಶಿಕ್ಷಣ ಸ್ನಾತಕೋತ್ತರ ಡಿಪ್ಲೊಮೊ ಪದವಿ ಪಡೆದಿದ್ದಾರೆ. ‘ಆಧುನಿಕ ಕನ್ನಡ ಮಹಾಕಾವ್ಯಗಳನ್ನು ಕುರಿತು ಅವರು ನಡೆಸಿದ ಸಂಶೋಧನೆಗೆ ಡಾಕ್ಟರೇಟ್ ಪದವಿ ದೊರೆತಿದೆ. ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ಇವರು ವೃತ್ತಿಯಿಂದ ಶಿಕ್ಷಕರು.  ಸಾಹಿತ್ಯ ಮತ್ತು ಸಂಸ್ಕೃತಿ ಅವರ ಆಸಕ್ತಿಯ ಕ್ಷೇತ್ರ. `ಕೆಮ್ಮುಗಿಲು', `ಗುಲಾಬಿ ಮುಳ್ಳು' `ಯುಗಧರ್ಮ ಮತ್ತು ಆಧುನಿಕ ...

READ MORE

Related Books