ಕಲ್ಪನೆಯ ಕಡಲು

Author : ಕಲ್ಪನಾ ಎನ್‌.

Pages 61
Year of Publication: 2020
Published by: ಕಲ್ಪನ ಎನ್.

Synopsys

ಲೇಖಕಿ ಕಲ್ಪನ ಎನ್‌ ಅವರ ಕವನ ಸಂಕಲನ ʻಕಲ್ಪನೆಯ ಕಡಲುʼ. ಪುಸ್ತಕದ ಮುನ್ನುಡಿಯಲ್ಲಿ ಅಜಯ ಕುಮಾರ್‌ ಸಿಂಹ ಐ.ಪಿ.ಎಸ್.‌ ಅವರು, “ಕಲ್ಪನೆಯ ಕಡಲು ಕಲ್ಪನಾ ರವರ ಕವಿತೆಗಳನ್ನು ಓದಿ ನಾನು ಬಹಳ ಸಂತೋಷ ಪಡೆದಿದ್ದೇನೆ. ನನ, ಭರವಸೆಗಳಿಗೆ ಬೆಂಬಲ ಸಿಕ್ಕಿದೆ. ಕಲ್ಪನಾ ಅವರು ಹೇಳಿದ ಹಾಗೆ ಅವರ ಕವಿತೆಗಳ ಉದ್ಭವ ಅವರ ಸ್ವಂತ ಅನುಭವಗಳಿಂದ. ಇದು ಹೀಗೇನೇ ಇರಬೇಕು ದೀಪಕ್ಕೆ ಎಣ್ಣೆ ಹೇಗೆ ಅವಶ್ಯ ಹಾಗೆಯೇ ಬದುಕಿಗೆ ಸ್ನೇಹ ಮತ್ತು ಪ್ರೀತಿ. ಸ್ನೇಹದ ವಿವಿಧ ಆಯಾಮಗಳ ಬಗೆಗೆ ಕವನ ಸಂಕಲನದಲ್ಲಿ ಕಲ್ಪನಾ ಅವರು ಕೆಲವು ಕವನಗಳನ್ನು ಬರೆದಿದ್ದಾರೆ. ಕೆಲವು ಕವನಗಳಲ್ಲಿ ಯುವಕಯುವತಿಯ ಪ್ರೇಮದ ವಿಷಯಗಳು ಕಂಡುಬರುತ್ತದೆ. ತಾಯಿ-ಮಗಳ ಪ್ರೇಮ ವಿಷಯಗಳಿವೆ. ಕೆಲವು ಕವನಗಳಲ್ಲಿ ಪ್ರೇಮ ಲೌಕಿಕ ಮತ್ತು ಆಧ್ಯಾತ್ಮಿಕ ಎರಡು ಕಡೆಗೆ ಅರಳುತ್ತಿದೆ ಎಂದು ನನಗೆ ಅನಿಸುತ್ತದೆ. ಈ ಕವನ ಸಂಕಲನದ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣುವ ಇನ್ನೊಂದು ವಿಷಯ ನೆನಪುಗಳು. ಕಲ್ಪನಾ ರವರು ತಮ್ಮ ನೆನಪುಗಳನ್ನು ಕವಿತೆಯ ರೂಪದಲ್ಲಿ ತಂದಿದ್ದಾರೆ. ಸಫಲರಾಗಿದ್ದಾರೆ. ವೈಯಕ್ತಿಕ ಸಾಮರಸ್ಯದ ಮೂಲಕ ಅಥವಾ ಅದರ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಪಡೆಯುವುದಕ್ಕೆ ಕವಿತೆಯಿಂದ ಸಹಾಯ ಸಿಕ್ಕಬಹುದು ಎಂಬ ಆಸೆ ಕಲ್ಪನಾ ರವರ ಕವನಗಳಲ್ಲಿ ನೋಡಬಹುದು” ಎಂದು ಹೇಳಿದ್ದಾರೆ.

About the Author

ಕಲ್ಪನಾ ಎನ್‌.

ಕಲ್ಪನಾ ಎನ್‌. ಅವರು ಮೂಲತಃ ತುಮಕೂರಿನವರು. ನಾರಾಯಣ ಸ್ವಾಮಿ ಮತ್ತು ಗಂಗಾವತಿ ಅವರ ಪುತ್ರಿಯಾಗಿರುವ ಇವರು, ಡಿ.ಎಡ್.‌ ಹಾಗೂ ಬಿ.ಎ ಪದವೀಧರರು. ಪ್ರಸ್ತುತ ಪೋಲಿಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ ಇವರ ಹವ್ಯಾಸ. ಇವರ ಮೊದಲ ಕವನ ಸಂಕಲನ ʻಕಲ್ಪನೆಯ ಕಡಲುʼ. ...

READ MORE

Related Books