ಬಾನ ಬಾಗಿಲ ಚಿಲಕ

Author : ಅಂಜನಾ ಕೃಷ್ಣಪ್ಪ

Pages 114

₹ 100.00




Year of Publication: 2016
Published by: ರೋಹಿಣಿ ಪ್ರಕಾಶನ
Address: ಹೂವಿನಹಡಗಲಿ, ಬಳ್ಳಾರಿ- 583219

Synopsys

ಬಾನ ಬಾಗಿಲ ಚಿಲಕ ಡಾ.ಅಂಜನಾ ಕೃಷ್ಣಪ್ಪ ಅವರು ಮಕ್ಕಳಿಗಾಗಿ ಬರೆದಿರುವ ಕವನಗಳ ಗುಚ್ಛ. ವಿಜ್ಞಾನದ ವಿಚಾರಗಳನ್ನು ಪದ್ಯ ರೂಪದಲ್ಲಿ ಹೇಳಲಾಗಿದೆ. ವಿಶೇಷವಾಗಿ ಹೈಸ್ಕೂಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡಂತೆ ರಚಿತವಾಗಿರುವ ಪದ್ಯಗಳೇ ಹೆಚ್ಚು. ಭೂಮಿ, ಭೂಮಿಯ ಉಪಗ್ರಹ, ಪಂಚಭೂತಗಳು, ಆಯಸ್ಕಾಂತ ಶಕ್ತಿ, ತಂತ್ರಜ್ಞಾನ, ಆರೋಗ್ಯದ- ವಿಚಾರ ಹೀಗೆ ಪಠ್ಯಕ್ಕೆ ಸಂಬಂಧಿಸಿದ ವಿಜ್ಞಾನ ವಿಚಾರಗಳನ್ನು, ವಿಜ್ಞಾನದ ಪರಿಭಾಷೆಗಳನ್ನೇ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪದ್ಯಗಳನ್ನು ಕಟ್ಟಿಕೊಟ್ಟಿದ್ದಾರೆ.

About the Author

ಅಂಜನಾ ಕೃಷ್ಣಪ್ಪ
(01 June 1953)

ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...

READ MORE

Related Books