ಹರೆಯದ ಕೆರೆತಗಳು

Author : ವಿಶ್ವನಾಥ್ ಎನ್. ನೇರಳಕಟ್ಟೆ

Pages 42

₹ 60.00
Year of Publication: 2015
Published by: ವಿ.ಎನ್. ನೇರಳೆಕಟ್ಟೆ
Address: ಪಂತಡ್ಕ ಹೌಸ್, ಶ್ರೀ ಮಂಜುನಾಥ ನಿಲಯ, ನೇರಳಕಟ್ಟೆ, ಬಂಟ್ವಾಳ, ದಕ್ಷಿಣ ಕನ್ನಡ- 574253

Synopsys

‘ಹರೆಯದ ಕೆರೆತಗಳು’ ವಿ.ಎನ್. ನೇರಳಕಟ್ಟೆ ಅವರ ಹನಿಗವಿತೆಗಳ ಸಂಕಲನ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾಗ ( ದ್ವಿತೀಯ) ವಿಶ್ವನಾಥ ವಿ.ಎನ್. ನೇರಳಕಟ್ಟೆಯವರು ರಚಿಸಿದ್ದ ಹನಿಗವಿತೆಗಳು ಇಲ್ಲಿ ಸಂಕಲಗೊಂಡಿವೆ. ಕೇವಲ ಹದಿಹರೆಯದ ಪ್ರೀತಿ, ಪ್ರೇಮ ಆಕರ್ಷಣೆಗಳಿಗೆ ಸೀಮಿತಗೊಳ್ಳದೆ ವಿಷಯ ವೈವಿಧ್ಯವನ್ನು ಒಳಗೊಂಡಿರುವ ಹಲವು ಹನಿಗಳಿವೆ. ಅಲ್ಲದೆ , ಕನ್ನಡ, ರಾಜಕಾರಣ, ಪತ್ರಕರ್ತ, ಹೆಣ್ಣು, ಲಂಚ, ಶಿಕ್ಷಣ, ಚುನಾವಣೆ ಹೀಗೆ ಹಲವಾರು ವಿಷಯಗಳನ್ನು ಹಿಡಿದಿಡುವ ಪ್ರಯತ್ನವನ್ನೂ ಕವಿಗಳು ಮಾಡಿದ್ದಾರೆ.

About the Author

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ. ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ...

READ MORE

Related Books