ಬಳಪದ ಚೂರು

Author : ರೇಣುಕಾ ಕೋಡಗುಂಟಿ

Pages 70

₹ 40.00




Year of Publication: 2011
Published by: ಪರಶುರಾಮ ಕೋಡಗುಂಟಿ
Address: ಬಂಡಾರ ಪ್ರಕಾಶನ, ಮಸ್ಕಿ, ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ.

Synopsys

ಸ್ತ್ರೀಸಂವೇದನೆಯಲ್ಲಿ ಕಡುವಾಸ್ತವವನ್ನು ತಮ್ಮ ಕವನದಲ್ಲಿ ಚಿತ್ರಿಸಿದ್ದಾರೆ ಕವಯತ್ರಿ ರೇಣುಕಾ ಕೋಡಗಂಟಿ. 

 'ಇಂದು ತಿಂದ 

ಅನ್ನದಿಂದ 

ನಾಳೆಯ ಹಸಿವು 

ನೀಗುವುದಿಲ್ಲ; 

ಹಾಗಾಗಿ 

ಹೊಟ್ಟೆ ತುಂಬಿಸುವ 

ಶಕ್ತಿ ಅನ್ನಕ್ಕಿಲ್ಲ' ಎನ್ನುವ ರೂಪಕದೊಡನೆ ಎದುರಾಗಿ, ಸ್ತ್ರೀ ಸಂವೇದನಾ ಕಾವ್ಯಪರಂಪರೆಯನ್ನು ಅರಗಿಸಿಕೊಂಡು ಅಲ್ಲಿಂದಾಚೆಗೂ ಹೊಸ ! ಚೈತನ್ಯ ಪ್ರಕಟಿಸಬೇಕೆಂಬ ಹಂಬಲದ ಕವಿತೆಗಳಿವು. 

ಇದೀಗ ಹಜಾರದ 

ಎಲ್ಲಾ ಪ್ರಾಣಿಗಳ ಮುಖಕ್ಕೂ 

ನೀರೆರಚಿ ನೋಡಬೇಕಾಗಿದೆ 

ಯಾವುದು ನಕಲಿ 

ಯಾವುದು ಅಸಲಿ - ಹೀಗೆ ಸಾಮಾಜಿಕತೆಯ ವ್ಯಾಖ್ಯಾನಗಳು ಅವರ ಕವನ ಸಂಕಲನದಲ್ಲಿ ಅಭಿವ್ಯಕ್ತವಾಗಿವೆ. 

About the Author

ರೇಣುಕಾ ಕೋಡಗುಂಟಿ

ರೇಣುಕಾ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಅಯ್ಯಪ್ಪ ಕೋಡಗುಂಟಿ, ತಾಯಿ ಶಾಂತಮ್ಮ ಕೋಡಗುಂಟಿ, ರೇಣುಕಾ ಕೋಡಗುಂಟಿಯವರು ವಿದ್ಯಾಭ್ಯಾಸ ಎಂ.ಎ, ಎಂ.ಫಿಲ್, ಗೃಹಿಣಿ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ. ‘ಕೃತಿ ದೀವಿಗೆ ಟ್ರಸ್ಟ್, ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಬಳಪದ ಚೂರು(ಕವನ ಸಂಕಲನ-2011), ‘ನಮ್ಮ ಕನ್ನಾಡ ಪ್ರೇಮದ ಜೋತಿ (2011-ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರಿನ ಅಂಪವ್ವ ಪೂಜಾರಿ ಅವರು ಹಾಡಿರುವ ಜನಪದ ಹಾಡುಗಳ ಸಂಗ್ರಹ), ಅದೇ ಗಾಯಕರು ಹಾಡಿರುವ ‘ಇಜಬೂಪನ ಪದ’ (2019- ಎನ್ನುವ ಜನಪದ ಖಂಡಕಾವ್ಯ),  ‘ಭಾಷಾವಿಜ್ಞಾನ ಸಂಶೋಧನೆ ಇಂದು’ (ಸಂಶೋಧನಾ ಪ್ರಬಂಧಗಳ ಸಂಪಾದನೆ-2011), ಕರ್ನಾಟಕದಲ್ಲಿ ಶವಸಂಸ್ಕಾರ (ಸಂಶೋಧನಾತ್ಮಕ ...

READ MORE

Related Books