ಕಾವ್ಯ ಕಲ್ಯಾಣಿ

Author : ದೊಡ್ಡರಂಗೇಗೌಡPublished by: ದೇಸಿ ಪ್ರಕಾಶನ
Address: ಬೆಂಗಳೂರು

Synopsys

‘ಕಾವ್ಯ ಕಲ್ಯಾಣಿ’ ಕೃತಿಯು ದೊಡ್ಡರಂಗೇಗೌಡ ಅವರ ಕವನಸಂಕಲನವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಬರಗೂರು ರಾಮಚಂದ್ರಪ್ಪ ಅವರು, ಸಂಗಾತಿ ಸೊಬಗಿಂದು ಹೊಳೆದೈತೆ ಹೊಂದಾವರೆ ಹೂವ್ಹಂಗೆ ಚಂದ್ರಮ ನಕ್ಹಾಂಗೆ ಬಲು ಹೊಳೆದೈತೆ ಮುಂಜಾನೆ ಮಂಜೆಲ್ಲ ಚೆಂದಾಗೈತೆ ಸಂಗಾತಿ ತುಟಿಯಂಗೆ ಹವಳಾದ ಮಣಿಹಂಗೆ ಹೊಳಪಾಗೈತೆ ಮುಂಗಾರು, ಹೊನ್ನಾರು, ಸೂಲಂಗಿ, ಹೊಂಬಾಳೆ, ನೇಸರ, ಚಂದ್ರಮ – ಹೀಗೆ ಪ್ರಕೃತಿಗೆ ಹತ್ತಿರವಾದ ಪದಗಳನ್ನೇ ಬಳಸಿ ಸೊಗಸಾದ ಕವಿತೆ ಕಟ್ಟಿಕೊಡುವ ದೊಡ್ಡರಂಗೇಗೌಡರ `ಕಾವ್ಯ ಕಲ್ಯಾಣಿ’ ಯಲ್ಲಿ ಸುಮಾರು 160 ಕವಿತೆಗಳಿವೆ. 500 ಕ್ಕೂ ಹೆಚ್ಚು ಚಿತ್ರಗೀತೆಗಳನ್ನೂ ನೂರಾರು ಕವಿತೆಗಳನ್ನೂ ಬರೆದಿರುವ ದೊಡ್ಡರಂಗೇಗೌಡರ ಸಾಲುಗಳಲ್ಲಿ ನವೋದಯದ ರಮ್ಯತೆಯೂ ಇದೆ, ಬಂಡಾಯದ ಬವಣೆಯೂ ಇದೆ. ಗ್ರಾಮೀಣ ಸೊಗಡನ್ನು ಕವಿತೆಯಲ್ಲಿ ಕಾಣಿಸಿದವರು ದೊರಂಗೌ. ಕೊರಳ ಕೊಳಲ ಮಾಡಿಕೊಂಡು ಹಾಡ ಹೊರಟೆ ನಾನು, ಬವಣೆ ಬದುಕ ಮರೆತು ಅರಿತು ಸೇರಿಕೊಂಡೆ ನೀನು ಎನ್ನುವ ಆಶಯ ಅವರದು ಎಂದಿದ್ದಾರೆ.

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Related Books