ಆಯ್ದ ನೂರೊಂದು ಕವನ

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 124

₹ 100.00
Year of Publication: 2003
Published by: ಚಿತ್ರಭಾನು ಪ್ರಕಾಶನ
Address: 'ಭಾರತಿ' 6ನೇ ತಿರುವು, ವಿನಾಯಕನಗರ, ಮೈಸೂರು

Synopsys

‘ಆಯ್ದ ನೂರೊಂದು ಕವನ’ ಸಿ.ಪಿ.ಕೆ ಅವರ ಕವನಸಂಕಲನವಾಗಿದೆ. ಸಾಮಾಜಿಕ ಕಳಕಳಿಯ ಮುನ್ನೆಲೆಯಲ್ಲಿ ವ್ಯಕ್ತವಾಗುವ ವ್ಯಂಗ್ಯ ಮೊನಚು ಮತ್ತು ಬಂಡಾಯದ ಧೋರಣೆಗಳು ಅವರ ಕವನಗಳಲ್ಲಿ ಉದ್ದಕ್ಕೂ ಕಾಣಿಸುತ್ತವೆ.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Reviews

ಹೊಸತು- 2004-ಫೆಬ್ರವರಿ 

ಸಿ. ಪಿ. ಕೃಷ್ಣಕುಮಾರ್ ಅವರ ಕಾವ್ಯಕ್ಕೆ ಅರ್ಧಶತಮಾನದಷ್ಟು ಸಮಯದ ವಿಸ್ತಾರವಿದೆ. ನವೋದಯದಿಂದ ಇತ್ತೀಚಿನನವೋತ್ತರ ಹಾಗೂ ಬಂಡಾಯದವರೆಗೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಸಫಲವಾಗಿ ಹಾಯ್ದುಬಂದ ಅವರ ವೈಶಿಷ್ಟ್ಯವೆಂದರೆ ಸದ್ದುಗದ್ದಲವಿಲ್ಲದೆ ಕೃತಿರಚನೆ ಮಾಡಿರುವುದು. ಸಾಮಾಜಿಕ ಕಳಕಳಿಯ ಮುನ್ನೆಲೆಯಲ್ಲಿ ವ್ಯಕ್ತವಾಗುವ ವ್ಯಂಗ್ಯ ಮೊನಚು ಮತ್ತು ಬಂಡಾಯದ ಧೋರಣೆಗಳು ಅವರ ಕವನಗಳಲ್ಲಿ ಉದ್ದಕ್ಕೂ ಕಾಣಿಸುತ್ತವೆ. ಈ ಸಂಗ್ರಹದಲ್ಲಿ ನೂರೊಂದು ಕವನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

Related Books