ಉಡಿಯಲ್ಲಿಯ ಉರಿ

Author : ಶಿವಣ್ಣ ಇಜೇರಿ

Pages 64

₹ 20.00




Year of Publication: 2001
Published by: ವಿಚಾರ ಪ್ರಕಾಶನ
Address: ಚಂದ್ರಕಾಂತ ಕರದಳ್ಳಿ, ಲಕ್ಷ್ಮಿನಗರ,ಶಹಾಪುರ, ಜಿ: ಯಾದಗಿರಿ-585223
Phone: 8105010777

Synopsys

ಪ್ರಚಲಿತ ಸಮಸ್ಯೆಗಳು ಹಾಗೂ ಐತಿಹಾಸಿಕ ಅಸಹಜ ಘಟನೆಗಳ ಕುರಿತು ವಿಶ್ಲೇಷಣಾತ್ಮಕವಾಗಿ ಶಿವಣ್ಣಇಜೇರಿ ಅವರು ಬರೆದ ಕವನ ಸಂಕಲನವೇ- ’ಉಡಿಯಲ್ಲಿಯ ಉರಿ’. ನಮ್ಮ ಸುತ್ತಮುತ್ತಲಿನ ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆ -ವಿದ್ಯಮಾನಗಳ ಹಿನ್ನೆಲೆಯಲ್ಲಿ ವಿಷಯ ವಸ್ತುಗಳನ್ನು ಆಯ್ಕೆ ಮಾಡಿದ ಅಂಶಗಳು ಇಲ್ಲಿಯಕವನಗಳಲ್ಲಿವೆ. ಕವನಗಳಲ್ಲಿ ವಿಡಂಬನೆ, ವ್ಯಂಗ್ಯ, ವಿಚಾರಗಳ ಹೊಳವು, ವಿಶ್ಲೇಷಣೆ, ತರ್ಕ ಇತ್ಯಾದಿ ಅಂಶಗಳಿಂದ ಕವನಗಳು ಗಮನ ಸೆಳೆಯುತ್ತವೆ ಮಾತ್ರವಲ್ಲ; ಚಿಂತನೆಯನ್ನು ಪ್ರೇರೇಪಿಸುತ್ತವೆ ಹಾಗೂ ವಚನಗಳ ವಿಚಾರಗಳನ್ನೇ ಪ್ರತಿಪಾದಿಸುತ್ತವೆ.

 

About the Author

ಶಿವಣ್ಣ ಇಜೇರಿ
(13 May 1952)

ಶಹಾಪುರದ ಅಡತಿ ಅಂಗಡಿವೊಂದರಲ್ಲಿ ಗುಮಾಸ್ತರಾದ ಶಿವಣ್ಣ ಇಜೇರಿ ಅವರು ಸಾಹಿತ್ಯಾಸಕ್ತರು. ವಚನ ಸಾಹಿತ್ಯ ತತ್ವ ಅನುಯಾಯಿ. ಉಡಿಯಲ್ಲಿಯ ಉರಿ, ಆಧುನಿಕ ವಚನಗಳು , ಕರಗದ ಬೆಣ್ಣೆ ಹೀಗೆ 5 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಶರಣರ ವಚನಗಳ ವಿಶ್ಲೇಷಕರು. ’ಬಸವ ಮಾರ್ಗ’ ಮಾಸಿಕದಲ್ಲಿ ಲೇಖಕರು. ಶರಣರ ವಿಚಾರ ಪ್ರಸಾರ-ಪ್ರಚಾರಕ್ಕಾಗಿ ಹಿರಿಯ ಸಾಹಿತಿ ದಿ.ಲಿಂಗಣ್ಣ ಸತ್ಯಂಪೇಟೆ ಅವರು ಬಸವ ಮಾರ್ಗ ಪ್ರತಿಷ್ಠಾನದಿಂದ ಆರಂಭಿಸಿದ”ಮನೆಯಲ್ಲಿ ಮಹಾಮನೆ’ ಚಿಂತನಾ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ...

READ MORE

Related Books