ಗಾಯದ ಹೂವುಗಳು

Author : ಕಾಜೂರು ಸತೀಶ

Pages 1
Published by: ಫಲ್ಗುಣಿ ಪುಸ್ತಕ

Synopsys

 

2015ರ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಕೃತಿ ’ಗಾಯದ ಹೂವುಗಳು’. 

ಬದುಕು ಮತ್ತು ಬರೆಹಗಳ ನಡುವೆ ಆಳವಾದ ಕಂದಕವೇ ಉಂಟಾಗಿರುವ ಸಂದಿಗ್ಧತೆಯಲ್ಲಿ ಕಾಜೂರು ಸತೀಶ್ ಮತ್ತು ಅವರ ಕವಿತೆಗಳು  ಅಭೇದವೆನಿಸುತ್ತವೆ. ತಾನಿರುವ ಪರಿಸರದಿಂದಲೇ ಸಂಯೋಜನೆಗೊಂಡಿರುವ ಇಲ್ಲಿನ ಬಹುತೇಕ ರಚನೆಗಳು ಅವರ ಮುಖ್ಯ ಕಾವ್ಯಧ್ವನಿ, ತುಂಡು ರೊಟ್ಟಿಯ ಮೇಲೆ ಹಸಿದವನ ಹೆಬ್ಬೆಟ್ಟೊತ್ತಲು ಜಾಗವಿರಲಿ ಎನ್ನುವ ಸತೀಶ್, ತಾವು ಹೋದಲ್ಲೆಲ್ಲ ಭಿಕ್ಷಾಪಾತ್ರೆಯನ್ನಿಟ್ಟು ಕಾಯುತ್ತಿದ್ದೇನೆ, ಪ್ರಿಯ ವೈಟ್ ಕಾಲರ್ ಜನಗಳೇ, ಬನ್ನಿ ನಿಮ್ಮ ಹಳಸಿದ ರೂಪಕಗಳನಿಟ್ಟು ಹೋಗಿ ಎಂದು ವಿನಮ್ರವಾಗಿಯೇ ತಲೆಬಾಗುತ್ತಾರೆ. ಬದುಕಿನ ಯಾವುದೋ ಕಾಲಘಟ್ಟದಲ್ಲಿ ಕುಡಿಯೊಡೆವ ಕವಿತೆಗಳನ್ನು ಅನವರತ ತಮ್ಮ ಜೋಳಿಗೆಗೆ ಸೇರಿಸುತ್ತಲೇ ನಡೆದು ಇಂದು ನಮ್ಮೆದುರು ಗಾಯದ ಹೂವುಗಳಾಗಿ ಇರಿಸಿದ್ದಾರೆ.

ಬದುಕಿನ ವೈರುಧ್ಯಗಳು, ನಿತ್ಯ ಎಡತಾಕುವ ಸಂಗತಿ-ತಕರಾರುಗಳೊಡನೆ ಕವಿ ಮಾತಿಗಿಳಿವ ಪರಿಯೇ ಅನನ್ಯ. ಇಲ್ಲಿನ ಕಾಡು ಕವಿತೆ, ಹಾವು, ಚಪ್ಪಲಿಗಳು, ಬೀದಿಯ ಕವಿತೆಯ ಸಾಲುಗಳನ್ನು ಓದುತ್ತಾ ಹೋದಂತೆ ಕವಿಯ ನಿಜಮನೋಧರ್ಮವೊಂದು ಸ್ಪಷ್ಟವಾಗುತ್ತಾ ಹೋಗುತ್ತದೆ. ಈ ಎಲ್ಲ ಕವಿತೆಗಳಲ್ಲಿ ಅವರು ಭರವಸೆಯ ಬೀಜವನ್ನು ಬಿತ್ತುತ್ತಲೇ ನಡೆದಿದ್ದಾರೆ. ನಿರ್ವಾತದೊಳಗಿನ ಗಾಳಿಯನ್ನು ಊರ ಗಾಳಿಯಿಂದ ಪ್ರತ್ಯೇಕಿಸಬಲ್ಲ ಸೂಕ್ಷ್ಮ ಮನಸ್ಸಿನೊಂದಿಗೆ ಅವರು ಕಾವ್ಯದೊಡನೆ ಅನುಸಂಧಾನ ನಡೆಸಬಲ್ಲರು. ಈ ಸೂಕ್ಷತೆಯೇ ಅವರ ಕಾವ್ಯದ ಉಸಿರೂ ಸಹ. ಅಳುವವರ ಕಣ್ಣಲ್ಲಿ ನಗುವ ಹೂವೊಂದು ಬಿರಿಯಬೇಕು ಎನ್ನುವ ಆಶಯದ ಸತೀಶ್, ಬದುಕು ಮತ್ತು ಕವಿತೆಯನ್ನು ಜೊತೆಯಲ್ಲೇ  ಸಮೀಕರಿಸುವ ಭರವಸೆಯ ಕವಿಯಾಗಿದ್ದಾರೆ.  

About the Author

ಕಾಜೂರು ಸತೀಶ

ಕಾಜೂರು ಸತೀಸ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಗ್ರಾಮದವರು.  ಶಿಕ್ಷಣ ಇಲಾಖೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೋಮವಾರಪೇಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಗಾಯದ ಹೂವುಗಳು’ ಮತ್ತು ‘ಕಡಲ ಕರೆ’ ಪ್ರಕಟಿತ ಕೃತಿಗಳು ...

READ MORE

Related Books