ಕಾವ್ಯಸೂತ್ರ

Author : ಬಿ.ಎಚ್. ಶ್ರೀಧರ

Pages 428

₹ 0.00
Year of Publication: 1968
Published by: ವಿದ್ಯಾರಣ್ಯ ಗ್ರಂಥ ಪ್ರಕಾಶನ
Address: ಶಿರಸಿ

Synopsys

“ಕಾವ್ಯಸೂತ್ರ” ಕೃತಿಯು ಬಿ.ಎಚ್. ಶ್ರೀಧರ ಅವರ ಕವನಸಂಕಲನವಾಗಿದೆ. ಇಲ್ಲಿ ಕಾವ್ಯ ರಚನೆಯಲ್ಲಿ ಅಳವಡಿಸುವ ನಿತ್ಯ ಸತ್ಯಗಳು, ವಿವರಣೆಗಳು, ನಿತ್ಯನಿಷೇದಗಳು, ಟಿಪ್ಪಣಿಗಳ ಆಕಾರವನ್ನು ಕಾಣಬಹುದಾಗಿದೆ. ಕೃತಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲನೇಯ ಭಾಗದಲ್ಲಿ ಪ್ರಾಚೀನ ಷಟ್ ಸ್ಥಲ ಹಾಗೂ ಅವುಗಳ ಹಿನ್ನೆಲೆ ಮತ್ತು ಪರಿವಾರವನ್ನು ನೀಡಲಾಗಿದೆ. ಆಧುನಿಕ ಷಟ್ ಸ್ಥಲಗಳನ್ನು ಇದೇ ಭಾಗದಲ್ಲಿ ವಿವರಿಸಲಾಗಿದೆ. ಎರಡನೇಯ ಭಾಗದಲ್ಲಿ ಕಾವ್ಯಾತ್ಮವನ್ನು ಕಟ್ಟಿಕೊಡಲಾಗಿದ್ದು, ಎಂಟು ಕವಿವರ್ಗಗಳು, ಕಾರ್‍ಯದ ಅನುಘಟಕಗಳು, ಸಾಹಿತ್ಯದ ಪರಮಾರ್ಥ, ಕೃತಿ ಮೌಲ್ಯ ನಿರ್ಧಾರದ ಕುರಿತ ವಿಚಾರಗಳನ್ನು ಹಂಚಿಕೊಳ್ಳಲಾಗಿದೆ. ಭಾಗ ಮೂರರಲ್ಲಿ ಕಾವ್ಯ ಮತ್ತು ತತ್ವವಾದಗಳ ಕುರಿತು ವಿವರಿಸಲಾಗಿದೆ. ಅಭಿಜಾತ ಕಾವ್ಯ, ಅತಿ ರಂಜಕ ಕಾವ್ಯ, ನೈಸರ್ಗಿಕ ಕಾವ್ಯ, ವಿಧಾಯಕ ಕಾವ್ಯ, ವಾಸ್ತವಿಕ ಕಾವ್ಯ, ಪಶುಪಾಲ ಕಾವ್ಯ, ಅನುಭಾವ ಕಾವ್ಯದಂತಹ ವಿಚಾರಗಳನ್ನು ಇಲ್ಲಿ ಕಾಣಬಹುದು.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books