ಅನನ್ಯ ನಿನಾದ

Author : ಅನನ್ಯ ತುಷಿರಾ

Pages 132

₹ 120.00




Year of Publication: 2017
Published by: ಸೀಮಾ ಬುಕ್ಸ್
Address: ನಂ.27, ಜವರಯ್ಯ ಗಾರ್ಡನ್, 2ನೇ ಕ್ರಾಸ್, 3ನೇ ಬ್ಲಾಕ್, ತ್ಯಾಗರಾಜ ನಗರ, ಬೆಂಗಳೂರು- 560028
Phone: 8041229757

Synopsys

‘ಅನನ್ಯ ನಿನಾದ’ ಅನನ್ಯ ತುಷೀರಾ ಅವರ ಕವನ ಸಂಕಲನ. ಈ ಕೃತಿಗೆ ಲೇಖಕ ಜೋಗಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಅನನ್ಯ ಪದ್ಯಗಳೆಲ್ಲ ಎಲ್ಲಿಂದಲೋ ತಂದು ನೆಟ್ಟ ಅಲಂಕಾರಿಕ ಹೂಗಿಡಗಳಂತೆ ಕಾಣಿಸದೇ, ಸಹಜ ಅಂಗಳದಲ್ಲಿ ತನಗೆ ತಾನೇ ಹುಟ್ಟಿದ ತುಂಬೆ ಗಿಡದ ಹೂವಿನಂತೆನಳನಳಿಸುತ್ತವೆ. ಕವಿತೆಯೆಂಬುದು ಅರ್ಥವೆಂಬ ಜೀವಾವಧಿ ಶಿಕ್ಷೆಯಿಂದ ಪಾರಾಗುವುದಕ್ಕೆ ಹಣವಣಿಸುವ ಕೈದಿ ಅನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡೂ ಅನನ್ಯ ತುಷಿರಾ ಪದ್ಯಗಳನ್ನು ಓದಿ ಸಂತೋಷಪಡಬಹುದು. ನನ್ನೊಡನೆ ನಾನಾಡುವ ಮಾತು ಹಲವು ಅರ್ಥಗಳ ದಾಟಿ ಹುಟ್ಟುವ ನೂರೊಂದನೇ ಕನಸು ಆದಿಯೆಂಬುದೆಲ್ಲೋ ಕಳೆದು ಹೋದಂತೆ ಅಂತ್ಯದ ಹುಡುಕಾಟದಲ್ಲಿ ನಾನೇ ಸವೆದು ಹೋದಂತೆ ನಾನು ನಾನಾಗಿಯೇ ಉಳಿಯುವ ಅಪರಿಚಿತ ತಪನೆಯಂತೆ ಇಲ್ಲಿರುವ ಅಪರಿಚಿತ ತಪನೆ ಎಂಬ ಪದ ಒಮ್ಮೆ ಮನಸ್ಸನ್ನು ಜಗ್ಗುತ್ತದೆ. ಮತ್ತೇನನ್ನೋ ಹೇಳುತ್ತಿರುವಂತೆ ಭಾಸವಾಗುತ್ತದೆ. ಕವಿತೆಯ ಶಕ್ತಿಯೇ ಅದು. ನಮ್ಮೊಳಗೆ ಅವಿತಿರುವ ಏನೋ ಒಂದನ್ನು ಅದು ಅರಳಿಸಬಲ್ಲದು. ಅನನ್ಯ ಅವರ ಬಹುತೇಕ ಕವಿತೆಗಳಲ್ಲಿ ಅಂಥ ಹೊಳಹು ಕಾಣಿಸುತ್ತದೆ.

ಈ ಕವಿತೆಗಳು ಅವರನ್ನು ಕವಿಯಾಗುವ ಹಾದಿಯಲ್ಲಿ ಕರೆದೊಯ್ಯುತ್ತಿವೆ ಅನ್ನುವುದರ ಬಗ್ಗೆ ಯಾವ ಅನುಮಾನವಬ ಬೇಕಿಲ್ಲ ಎನ್ನುತ್ತಾರೆ ಲೇಖಕ ಜೋಗಿ. ಜೊತೆಗೆ ಅನನ್ಯ ಈ ಕವಿತೆಗಳ ಸಂಕಲವನ್ನು ತಮ್ಮ ಮಗನ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊರತರುತ್ತಿದ್ದಾರೆ. ತನ್ನಿಮಿತ್ತ ಕವಿತೆಗಳನ್ನು ಮಗನಿಗೆ ಉಡುಗೊರೆಯಾಗಿ ಕೊಡುತ್ತಿದ್ದಾರೆ. ಅನನ್ಯ ಕವಿತೆಯ ನಿನಾದ ಅವರನ್ನು ಮುದಗೊಳಿಸುತ್ತಿರಲಿ ಎಂದು ಹಾರೈಸಿದ್ದಾರೆ.

About the Author

ಅನನ್ಯ ತುಷಿರಾ

ಅನನ್ಯ ತುಷಿರಾ (ಸವಿತಾ ಆರ್.ಇನಾಮದಾರ್) ಮೂಲತಃ ಬಿಜಾಪುರ (ವಿಜಯಪುರ) ಜಿಲ್ಲೆ ತಾಳೀಕೋಟೆಯವರು. ತಂದೆ ಶ್ರೀ ರಾಜಪ್ಪ ಇನಾಮದಾರ ಮತ್ತು ತಾಯಿ ಶ್ರೀಮತಿ ಅನಸೂಯಾ ಇನಾಮದಾರ. ತನ್ನದೇ ಪುಟ್ಟ ಅಕ್ಷರ ಜಗತ್ತಿನಲ್ಲಿ 'ಅನನ್ಯ ತುಷಿರಾ'. ಜೀವ-ಭಾವದ ಸಂಗಾತಿ ಕಿರಣ್ ಬಿರಾದಾರ್. ಹಾಗಾಗಿ ಇವರು 'saki’ ಕೂಡ. ಮಡಿಲ ಬೆಳಕು ಅಶ್ಮಯು ನಿನಾದ. ಬಹುತೇಕ ಓದು ತಾಳಿಕೋಟೆಯಲ್ಲಿ. ನಂತರ ಧಾರವಾಡದಲ್ಲಿ. ಸದ್ಯ ಬೆಂಗಳೂರು ವಾಸಿ. ಮೊದಲ ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ. ಪ್ರಸ್ತುತ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸಹಾಯಕ ಆಯುಕ್ತರ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ. ಅಕ್ಷರ ಪ್ರೀತಿ ಅಪಾರ. ಆಗೀಗ ಅನುಭೂತಿಗೆ ...

READ MORE

Related Books