ನೆಲ ತಬ್ಬಿದ ಮುಗಿಲು

Author : ರಮೇಶ ಸಿ. ಬನ್ನಿಕೊಪ್ಪ

Pages 80

₹ 100.00
Year of Publication: 2019
Published by: ರಮೇಶ. ಸಿ. ಬನ್ನಿಕೊಪ
Address: ಮರ್ಲಾನಹಳ್ಳಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ
Phone: 9902746235

Synopsys

ರಮೇಶ ಬನ್ನಿಕೊಪ್ಪ ಅವರ 180 ಚುಟುಕು-ಕುಟುಕು ಕವನಗಳ ಸಂಗ್ರಹ ‘ನೆಲ ತಬ್ಬಿದ ಮುಗಿಲು’. ಇಲ್ಲಿ ಮುಸುಕಿನ ಪ್ರೀತಿ, ಪ್ರೇಮ, ರಸಿಕತೆ, ತಣ್ಣನೆಯ ಗುದ್ದಾಟದ ಚುಟುಕುಗಳಿವೆ. ‘ನನ್ನವಳಿಗೆ ತಿಂಗಳ ಮೊದಲಲಿ ನಾನಂದ್ರೆ ತುಂಬ ಹಂಬಲ ಯಾಕಂದ್ರೆ ... ಸೀದಾ ಅವಳ ಕೈಗೆ ನೀಡುವೆ ಸಂಬಳ’ ‘ಹೆಂಡತಿ’ ಹನಿಗವನದಲ್ಲಿ ‘ಹೆಂಡ......ಕ್ಕೆ ಇತಿಶ್ರೀ ಹಾಡಬಹುದು ಹೆಂಡತಿಗಲ್ಲ ಬಲು ಬೆಲ್ಲ’ ಮೇಲಿನ ಚುಟುಕುಗಳು ಕಚಗುಳಿಯಿಟ್ಟು ಓದಿಸಿಕೊಳ್ಳುವ, ಸವಿದು ಸುಖ ಪಡುವ ಚುಟುಕುಗಳು. ಸಂಕಲನದಲ್ಲಿ ಸಂಸಾರದ ಸಾರವನ್ನು ತಿಳಿಸುವ ಹನಿಗವನಗಳು ಉಂಟು.

About the Author

ರಮೇಶ ಸಿ. ಬನ್ನಿಕೊಪ್ಪ

ಕವಿ ರಮೇಶ ಸಿ. ಬನ್ನಿಕೊಪ್ಪ ಅವರು ಕೊಪ್ಪಳ ಜಿಲ್ಲೆಯ ಹಲಗೇರಿ ಗ್ರಾಮದವರು. ಸ್ಪಂದನ ಓದು ಹೊತ್ತಿಗೆ ಬಳಗದ ಮುಖ್ಯಸ್ಥರು. ಸೃಜನ ಸಮತ ಪ್ರಕಾಶನ ನಡೆಸುತ್ತಿದ್ದಾರೆ. ಪ್ರಸ್ತುತ ಗಂಗಾವತಿ ತಾಲೂಕಿನ ಹಿರೇಜಂತಕಲ್ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ, ಶಾಲೆಯ ಶಿಕ್ಷಕರಾಗಿದ್ದಾರೆ. ‘ಹೆಜ್ಜೆ ಮೂಡದ ಹಾದಿ (ಕವನ ಸಂಕಲನ- 2018), ನೆಲ ತಬ್ಬಿದ ಮುಗಿಲು (ಹನಿಗವನ ಸಂಕಲನ-2019) ಪ್ರಕಟಣೆ ಕಂಡಿದೆ. ...

READ MORE

Related Books