ಪರಿಮಳದ ಸುಗ್ಗಿ

Author : ಚಿ.ಶ್ರೀನಿವಾಸರಾಜು

Pages 166

₹ 200.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

'ಹೊಸತು' ಪತ್ರಿಕೆ ಪ್ರಾರಂಭದ ಐದು ವರ್ಷಗಳ ಅರವತ್ತು ಸಂತಿಗಳಲ್ಲಿ ಪ್ರಕಟ ವಾಗಿರುವ ಸಂಪಾದಕೀಯ ಲೇಖನಗಳೂ ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದ ಹತ್ತಾರು ಲೇಖನಗಳನ್ನು ಕೆಲವು 'ವಾಚಿಕೆ'ಗಳ ರೂಪದಲ್ಲಿ ಓದುಗರಿಗೆ ಒದಗಿಸಿಕೊಡಬೇಕೆಂಬ ಉದ್ದೇಶದಿಂದ  ಈ ಪರಿಮಳದ ಸುಗ್ಗಿ ಕೃತಿಯನ್ನು ರಚಿಸಲಾಸಿದೆ.  ಈ ಕವನಸಂಕಲನವು 96 ಕವಿತೆಗಳನ್ನು ಹೊಂದಿದೆ. 

ಇಲ್ಲಿನ ಕವನಗಳು ಪತ್ರಿಕೆಯಲ್ಲಿ ಪ್ರಕಟಗೊಂಡ ಕಾಲಕ್ರಮದಲ್ಲೇ ಪ್ರಕಟಿಸಲಾಗಿದೆ. ಕೆಲವು ಅನುವಾದ ಕವನಗಳಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ಎಲ್ಲ ತಲೆಮಾರಿನ ಕವಿಗಳು ಈ ಸಂಕಲನದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಕವನಗಳನ್ನು ಬರೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಸಂತೋಷದ ಸಂಗತಿ. ಆದರೆ ಬರೆಯುವ ಬಹುಪಾಲು ಕವಿಗಳು, ಕಾವ್ಯರಚನೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಸೃಜನಶೀಲ ಅಭಿವ್ಯಕ್ತಿಯ ಸ್ವಾತಂತ್ರ್ಯ ಕವಿಗೇ ಬಿಟ್ಟ ವಿಚಾರ. ಆದರೆ ಕಾವ್ಯದಲ್ಲಿರಬೇಕಾದ ಲಯ, ವಸ್ತುವಿನ ಆಯ್ಕೆ, ಭಾಷೆಯ ಬಳಕೆ, ಅನುಭವದ ಅಭಿವ್ಯಕ್ತಿಯ ರೀತಿಯ ಬಗ್ಗೆ ಚಿಂತನೆ, ಅಭ್ಯಾಸ ಸಾಕಷ್ಟು ಕಂಡುಬರುತ್ತಿಲ್ಲ. ನಮ್ಮ ಕವಿಗಳಲ್ಲಿ, ಹಲವರು ಕೆಲವು ಉತ್ತಮ ಕವನಗಳ ರಚನೆಯ ನಂತರ ಸೊರಗುತ್ತಾರೆ; ಅನುಕರಣೆಯ ಲೀಲೆಯಲ್ಲೇ ವಿಶ್ರಾಂತರಾಗುತ್ತಾರೆ; ಸವಕಲು ಹಾದಿಯಲ್ಲೇ ಜಾರುತ್ತಾರೆ; ಅಚ್ಚುಕಟ್ಟಾದ ಪದ್ಯ ರಚನೆಯೇ ಕಾವ್ಯವೆಂದು ಭ್ರಮಿಸುತ್ತಾರೆ; ಪುನರಾವರ್ತನೆಯ ಸುಳಿಯಲ್ಲಿ ಸಿಲುಕುತ್ತಾರೆ. ತೆರೆದ ಮನಸ್ಥಿತಿಯಿಂದ ಜೀವನ ಪ್ರೀತಿ, ಜೀವನ ಚೈತನ್ಯದಿಂದ ವಂಚಿತರಾಗುತ್ತಾರೆ. ಇಂದಿನ ಧಾವಂತ ಗ್ರಾಹಕ ಲೋಕದ, ಆಗುಹೋಗುಗಳ ಬದುಕಿಗೆ ಬದ್ಧರಾಗಿ ಹೊಸರೀತಿಯಲ್ಲಿ ಅಭಿವ್ಯಕ್ತಗೊಳಿಸುವವರು, ಕಾವ್ಯವನ್ನು ಕಂಡುಕೊಳ್ಳುವವರು ಅಪರೂಪ. ಆದರೂ ಅಲ್ಲಲ್ಲಿ ಬೆಳ್ಳಿಗೆರೆಗಳಿಗೆ ಕೊರತೆಯಿಲ್ಲ ಎನ್ನುವುದು ಲೇಖಕರ ಮಾತಾಗಿದೆ. 


 

About the Author

ಚಿ.ಶ್ರೀನಿವಾಸರಾಜು
(28 November 1942 - 28 December 2007)

ಕನ್ನಡಕ್ಕಾಗಿ ಶ್ರಮಿಸಿದ, ಯುವ ಪ್ರತಿಭೆಗಳ ಪಡೆಯನ್ನೇ ಸೃಷ್ಟಿಸಿ ಕನ್ನಡದ ಕಂಪು ಹೊಸ ತಲೆಮಾರಿಗೂ ತಲುಪುವಂತೆ ದುಡಿದ ಸಾಹಿತಿ ಚಿ. ಶ್ರೀನಿವಾಸರಾಜು. ಮೇಷ್ಟ್ರು ಎಂದೇ ಖ್ಯಾತರು. ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ತಂದೆ ವಿ. ಚಿಕ್ಕರಾಜು, ತಾಯಿ- ಸಾವಿತ್ರಮ್ಮ. ಆರಂಭಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿಯೇ ಪಡೆದು, ಹೈಸ್ಕೂಲು ಓದುವಾಗ ‘ಶಾಲು ಜೋಡಿಗಳು’ ಎಂಬ ನಾಟಕ ರಚಿಸಿದ್ದರು. ಆನಂತರದಲ್ಲಿ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದಿದ್ದು, ಕೆಲಕಾಲ ಲೋಹ ವಿಕಾಸ ಮಂಡಲಿಯಲ್ಲಿ ಸಾರಿಗೆ ಅಧಿಕಾರಿಯಾಗಿದ್ದರು. ‘ಛಸನಾಲ ಬಂಧು’ ಕವನ ಸಂಕಲನ ಪ್ರಕಟಿಸಿದ್ದರು. ಮತ್ತೆ ಓದುವ ಹಂಬಲದಿಂದ ಬಿ.ಎ, ಎಂ.ಎ. ಪದವಿ ಪಡೆದು, ಇಂಡಾಲಜಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನ ಕನ್ನಡ ...

READ MORE

Related Books