ಅವನ ಕರವಸ್ತ್ರ

Author : ವಾಸುದೇವ ನಾಡಿಗ್

₹ 100.00
Year of Publication: 2018
Published by: ಗೋಮಿನಿ ಪ್ರಕಾಶ
Address: ಶಾಂತಿಗಣೆ, ತಣಕೂಟು - ೦2

Synopsys

ಲೇಖಕ ವಾಸುದೇವ ನಾಡಿಗ್‌ ಅವರ ಕವನ ಸಂಕಲನ ಕೃತಿ ʻಅವನ ಕರವಸ್ತ್ರʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಸುಬ್ರಾಯ ಚೊಕ್ಕಾಡಿ ಅವರು, “ಸದಾ ಕಾವ್ಯವನ್ನೇ ಧ್ಯಾನಿಸುತ್ತಿರುವ ಗೆಳೆಯ ವಾಸುದೇವ ನಾಡಿಗರು ಇಂದು ಬರೆಯುತ್ತಿರುವ, ನಮ್ಮ ಮಧ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಒಣ ವೈಚಾರಿಕತೆಯ ಭಾರವಿಲ್ಲದ ಭಾವಾತಿರೇಕದ ಗೂಳೂ ಇಲ್ಲದ ಇಲ್ಲಿನ ಕವಿತೆಗಳು ಬುದ್ದಿ-ಭಾವಗಳ ಹಿತವಾದ ಸಾಂಗತ್ಯದಲ್ಲಿ ಹೂವರಳದಂತೆ ಅರಳಿಕೊಂಡಿದೆ. ಸೂಕ್ಷ್ಮ ವಸ್ತುವಿನ ಆಯ್ಕೆ, ನಿರೂಪಣೆಯಲ್ಲಿನ ಸೂಕ್ಷತೆ, ಭಾಷೆಯ ಸಂಯಮಪೂರ್ಣ ಬಳಕೆ, ಲಯದ ಮೇಲಿನ ಹಿಡಿತ, ಸುತ್ತವನ ಜೀವರಾಶಿಗಳ ಬದುಕನ್ನು ಕಂಡಾಗ ಮೂಡುವ ಭಾವಗಳ ಬೆಡಗು, ರೂಪಕಗಳ ಸೃಷ್ಟಿ, ಸರಳ ಮಾತುಗಳ ಮೂಲಕವೇ ತಾತ್ವಿಕತೆಯನ್ನು ಹೊಳೆಯಿಸುವಲ್ಲಿನ ಪಕ್ವತ.. | ಮೊದಲಾದ ಗುಣಗಳಿಂದ ವಾಸುದೇವ ನಾಡಿಗ್ ಸದ್ಯದ ಕನ್ನಡ ಕಾವ್ಯ ಲೋಕದಲ್ಲಿ ಗಟ್ಟಿಯಾಗಿ ತಮ್ಮ ಹೆಜ್ಜೆಗಳನ್ನು ಮೂಡಿಸಿದ್ದಾರೆ. ʻಮನತೊರೆದು ಬದುಕಬಹುದು, ಮನತೋರದು ಬಾಳಲಾಗದು' ಎಂಬುದನ್ನು ಮಾರ್ಮಿಕವಾಗಿ ನಿರೂಪಿಸುವ ಇಲ್ಲಿನ ಕವಿತೆಗಳು ನಮ್ಮ ಮನದಲ್ಲಿ ಬಹುಕಾಲ ಉಳಿಯಬಲ್ಲ. ಶಕ್ತಿಯನ್ನು ಹೊಂದಿವೆ.

About the Author

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ...

READ MORE

Related Books