ನಾಲ್ಕು ಋತುಗಳ ಹುಡುಗಿ

Author : ಎಸ್. ನಾಗಶ್ರೀ ಅಜಯ್

Pages 84

₹ 120.00
Year of Publication: 2024
Published by: ಅಜೇಯ ಪ್ರಕಾಶನ
Address: ಬೆಂಗಳೂರು

Synopsys

‘ನಾಲ್ಕು ಋತುಗಳಹುಡುಗಿ’ ಎಸ್. ನಾಗಶ್ರೀ ಅಜಯ್ ಅವರ ಮೊದಲ ಕವನ ಸಂಕಲನವಾಗಿದ್ದು, ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು, 2024ರಲ್ಲಿ ಬಿಡುಗಡೆಗೊಂಡ ಕೃತಿಯಾಗಿದೆ. ಹೆಸರೇ ಸೂಚಿಸುವ ಹಾಗೆ ಪ್ರಸ್ತುತ ಕೃತಿಯಲ್ಲಿ ನಾಲ್ಕು ಋತುಗಳಿದ್ದು, ಒಟ್ಟು ನಲವತ್ತೆರಡು ಕವಿತೆಗಳಿವೆ. ಅನುದಿನವೂ ಕಾಡುವ, ನಮ್ಮ ಆಲೋಚನಾ ಕ್ರಮದ ಕ್ಷಿತಿಜವನ್ನು ವಿಸ್ತರಿಸುವ ಇಲ್ಲಿಯ ಕವಿತೆಗಳು ಮೊದಲ ಓದಿಗೇ ಅತ್ಯಂತ ಆಪ್ತವಾಗಿ ದಕ್ಕುತ್ತವೆ. ಹೀಗೆ ದಕ್ಕುವುದು ಯಶಸ್ವಿ ಸಂಕಲನದ ಪ್ರತೀಕವೇ ಆಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕವಿಯ ಸಾವಯವ ಸಹಜ ಅಭಿವ್ಯಕ್ತಿ. ಸಂಕೀರ್ಣತೆಯೇ ಕಾವ್ಯದ ಜೀವಾಳವೆಂದು ಭಾವಿಸಿಕೊಂಡು, ಬರೆಯುತ್ತಾ, ಬರೆಯುತ್ತಾ ಅದೇ ಭ್ರಮೆಯ ಜಾತ್ರೆಯಲ್ಲಿಯೇ ಕಳೆದು ಹೋಗುತ್ತಿರುವವರ ನಡುವೆ ನಾಗಶ್ರೀಯವರು ತುಂಬಾ ವಿಭಿನ್ನವಾಗಿ ನಿಲ್ಲುತ್ತಾರೆ ಎಂದಿದ್ದಾರೆ ಲೇಖಕ ಸದಾಶಿವ ದೊಡಮನಿ.

About the Author

ಎಸ್. ನಾಗಶ್ರೀ ಅಜಯ್
(08 January 1990)

ಲೇಖಕಿ ಎಸ್. ನಾಗಶ್ರೀ ಅಜಯ್ ಅವರು 1990 ಜನವರಿ 8ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಳೆದದ್ದು, ಶಿಕ್ಷಣ ಪಡೆದದ್ದು, ಸಾಂಸ್ಕೃತಿಕ ಲೋಕಕ್ಕೆ ತೆರೆದುಕೊಂಡಿದ್ದು ಮೈಸೂರಿನಲ್ಲಿ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಅವರು ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಷಯದ ವಿದ್ಯಾರ್ಥಿಯಾಗಿದ್ದು, ಅನಂತರ ವಾಣಿಜ್ಯ ವಿಷಯದ ಬಗ್ಗೆ ಆಸಕ್ತಿ ತೆಳೆದು, ಮೈಸೂರಿನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬೆಳ್ಳಿ ಪದಕದೊಂದಿಗೆ ಬಿ.ಕಾಂ ಪದವಿಯನ್ನು ಪೂರೈಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಕಾಂ ಹಾಗೂ ಪ್ರತಿಷ್ಠಿತ ಐ.ಸಿ.ಎಂ.ಎ ಇಂಟರ್ ಪದವೀಧರೆಯಾಗಿದ್ದಾರೆ. 12 ವರ್ಷಗಳ ಕಾಲ ಆಕಾಶವಾಣಿ ಎಫ್ ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ...

READ MORE

Related Books