ಅಕ್ಕನಂತೊಬ್ಬಳು ಅನುರಕ್ತೆ

Author : ಪೂರ್ಣಿಮಾ ಸುರೇಶ್

Pages 86

₹ 100.00
Year of Publication: 2017
Published by: ಪ್ರಸಾರಾಂಗ
Address: ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು-576199

Synopsys

‘ಅಕ್ಕನಂತೊಬ್ಬಳು ಅನುರಕ್ತೆ’ ಕೃತಿಯು ಪೂರ್ಣಿಮಾ ಸುರೇಶ್ ಅವರ ಕವನ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಚ್. ಎಸ್. ವೆಂಕಟೇಶಮೂರ್ತಿ ಅವರು, ‘ಅಕ್ಕನಂತೊಬ್ಬಳು ಅನುರಕ್ತೆ’ ಆಸೆ ಹುಟ್ಟಿಸುವ ಒಂದು ಕವಿತಾ ಸಂಗ್ರಹ, ಈ ಕವಿತೆಗಳನ್ನು ಬರೆದ ಪೂರ್ಣಿಮಾ ಉಡುಪಿಯ ತನ್ನ ಮನೆಯಲ್ಲಿ ಅತಿಥಿಗಳ ಸುಗ್ರಾಸ ಭೋಜನವಾದ ಮೇಲೆ ತನ್ನ ಕೆಲವು ಚೆಲುವಾದ ಪ್ರಬಂಧಗಳನ್ನು ಓದಿದ್ದು ನನ್ನ ನೆನಪಿನ ಕೋಶದಲ್ಲಿ ಹಸಿಯಾಗಿ ಉಳಿದಿದೆ. ಸಲೀಲವಾಗಿ ಕಥನದ ಮೈಗೊಳ್ಳುವ ಆಕೆಯ ಪ್ರಬಂಧಗಳ ಮುಗ್ಧ ಚೆಲುವು ನನ್ನನ್ನು ಆಕರ್ಷಿಸಿತ್ತು. ಪೂರ್ಣಿಮಾ ಪದ್ಯಗಳನ್ನೂ ಬರೆಯುತ್ತಾರೆ ಎಂಬುದು ಆಗ ತಿಳಿದಿರಲಿಲ್ಲ. ಈಚೆಗೆ ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸಿಕ್ಕ ಪೂರ್ಣಿಮಾ, ತಮ್ಮ ಕವಿತೆಗಳ ಗುಚ್ಛವನ್ನು ಕೊಟ್ಟು – ಇವನ್ನು ಓದಿ, ದಯವಿಟ್ಟು ಮುನ್ನುಡಿ ರೂಪದ ಕೆಲವು ಮಾತು ಬರೆದುಕೊಡಿ ಎಂಬ ಬೇಡಿಕೆ ನನ್ನ ಮುಂದೆ ಇಟ್ಟರು. ಓದುತ್ತೇನೆ, ಬರೆಯಬಹುದೆನ್ನಿಸಿದರೆ ಖಂಡಿತ ಬರೆಯುತ್ತೇನೆ ಎಂದು ಪೂರ್ಣಿಮಾಗೆ ಆಶ್ವಾಸನೆ ಕೊಟ್ಟೆ. ನನ್ನ ಸ್ವಂತ ಕೆಲಸದ ಒತ್ತಡದಲ್ಲಿ ಕವಿತೆಗಳನ್ನು ಓದುವುದು ಆಗಿರಲಿಲ್ಲ. ಈಗ ಸ್ವಲ್ಪ ಬಿಡುವು ದೊರಕಿ ಪೂರ್ಣಿಮಾ ಅವರ ಕವಿತೆಗಳನ್ನು ಕುತೂಹಲದಿಂದ ಓದಿದೆ. ಕವಿತೆಗಳನ್ನು ಓದಿದಾಗ ಮೊದಲು ನನ್ನ ಗಮನಕ್ಕೆ ಬಂದ ವಿಶೇಷ ಈ ಹೊಸ ಕವಿಯ ಭಾಷಾ ಸಂಪತ್ತು ತನ್ನ ಒಳಬಾಳಿನ ಎಂಥ ಸೂಕ್ಷ್ಮವನ್ನೂ ಅಭಿವ್ಯಕ್ತಿಸಬಲ್ಲ ಭಾಷಾ ಸಂಪತ್ತು ಪೂರ್ಣಿಮಾಗೆ ಇದೆ. ಈ ಭಾಷಾ ವೈವಿಧ್ಯತೆಯನ್ನು ಕವಿಗಳಲ್ಲಿ ಕಾಣುವುದು ಅಪರೂಪವೇ ಒಂದೊಂದಾಗಿ ಬಿಡಿಕವಿತೆಗಳನ್ನು ಓದುವಾಗ ಕೆಲವು ಕವಿತೆಗಳು ಚಕ್ಕನೆ ಅಂತರಂಗಕ್ಕೆ ಕಟ್ಟಿಕೊಂಡವು. ಒಮ್ಮೆ ಪೂರ್ಣಿಮಾ ಹಂಪೆಯ ಯಾತ್ರೆಗೆ ಹೋಗುತ್ತಾಳೆ. ಹಾಳು ಹಂಪಿ ಆಕೆಯ ಅಂತರಂಗವನ್ನು ತುಂಬಿಕೊಳ್ಳುತ್ತದೆ. ಗರ್ಭಗುಡಿಗಳಲ್ಲಿ ಭಗ್ನವಾಗಿರುವ ದೇವಮೂರ್ತಿಗಳು ಆಕೆಯ ಮನೋಗರ್ಭವನ್ನು ತಲ್ಲಣ ಗೊಳಿಸುತ್ತದೆ’ ಎಂದಿದ್ದಾರೆ.

 

About the Author

ಪೂರ್ಣಿಮಾ ಸುರೇಶ್

ಲೇಖಕಿ, ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿ ಜಿಲ್ಲೆಯ ಹಿರಿಯಡಕದವರು. ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಕಿರುತೆರೆ, ನಾಟಕ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಇಪ್ಪತ್ತೈದು ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ನಾಟಕದ ಬಿ ಗ್ರೇಡ್ ಕಲಾವಿದೆಯೂ ಆಗಿದ್ದಾರೆ. ಸಂಘಟಕಿ ಹಾಗೂ ನಿರೂಪಕಿಯಾಗಿರುವ ಅವರು ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿರುವ ಕನ್ನಡ ಮತ್ತು ಕೊಂಕಣಿ ಭಾಷೆಯ 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಅವರ ‘ಸತ್ಯನಾಪುರದ ಸಿರಿ’ ನಾಡಿನುದ್ದಕ್ಕೂ ಸುಮಾರು 35 ಪ್ರದರ್ಶನಗಳನ್ನು ಕಂಡಿದೆ. ಕರ್ನಾಟಕದ ಪ್ರಶಸ್ತಿಗಳು : ಗ್ಲೋಬಲ್ ಸಿನಿ ...

READ MORE

Related Books