ಸಹಗಮನ

Author : ಎಚ್.ಎಸ್. ಅನುಪಮಾ

Pages 120

₹ 100.00
Published by: ಶ್ರೀ ರಾಘವೇಂದ್ರ ಪ್ರಕಾಶನ ಅಂಕೋಲಾ
Phone: 94481 45370

Synopsys

ವೃತ್ತಿಯಲ್ಲಿ ವೈದ್ಯರಾಗಿ ತಳಸ್ತರದ ಜನರೊಂದಿಗೆ ಆಪ್ತ ಸಂಬಂಧವನ್ನು ಹೊಂದಿರುವ ಅನುಪಮಾ ಅವರು, ಪ್ರಕಾಶಕರಾಗಿ, ಸಂಘಟಕರಾಗಿ, ವಿಮರ್ಶಕಿಯಾಗಿ, ಲೇಖಕಿಯಾಗಿ ಗುರುತಿಸಿದ್ದಾರೆ.  ಅವರು ಉತ್ತಮ ಕವಯಿತ್ರಿ ಕೂಡ ಹೌದು. ಕವಿತೆ ಕಟ್ಟುವುದೆಂದರೆ ಅವರಿಗೆ ಬದುಕು ಕಟ್ಟುವುದೂ ಹೌದು. ಕುದಿಗೆ ಕುಶಲದ ಮಾತು ಗೊತ್ತೇ ಅನು ಎಂದು ತನ್ನ ಎದೆಯನ್ನೇ ಮುಟ್ಟೆ ಕೇಳುವ ಕವಯಿತ್ರಿ, ನಟಿಸುತ್ತಾ ಕಣ್ಣು ನೀರಾಡಿದರೂ ಕ್ಷಣದ ದುಃಖ ಸುಳ್ಳಾಗಿರುವುದಿಲ್ಲ  ಎಂದು ಕನ್ನ ಮುಟ್ಟಿಕೊಳ್ಳುತ್ತಾರೆ. ಚರಿತ್ರ ನಿನ್ನ ನ್ಯಾಯ ಸೂಕ್ಷ್ಮದ ಮನಸಿನಲ್ಲಿದೆ ನಿನ್ನೆಯ ಕಲ್ಪಿಸುವ ಇಂದಿನ ಕಣ್ಣಿನಲ್ಲಿದೆ? ಅಕ್ಷರಗಳಲ್ಲ, ಆಡದೇ ಉಳಿದವರ ಧಮನಿಗಳಲ್ಲಿದೆ! ನೊಂದವಗೆ ಮಿಡಿವ ಎದೆ ಬಡಿತದಲಿ ಅಡಗಿದೆ, ಎಂಬ ಜಾಗೃತ ರಾಜಕೀಯ ಪ್ರಜ್ಞೆಯೂ ಅವರ ಕವಿತೆಗಳಲ್ಲಿವೆ. ನಿಶ್ಯಬ್ದ ಕೋಶದಲಿ ಮಾತು ಬಂದಿಯಾಗುಳಿದು ಎಂದೋ ಹಾರಲಿ ಒಮ್ಮೆ ಭಾವಚಿಟ್ಟೆ, ಫಕ್ಕನೊಮ್ಮೆ ನಕ್ಕು ಬಿಡು,  ಅದುವ ಸಾವಿರ ಮಾತು, ಹರಳುಗಟ್ಟಲಿ ಒಳಗೆ ಸ್ನೇಹ ಬೆಸುಗೆ ಎಂಬ ನಿರೀಕ್ಷೆಗಳು ಈ ಸಂಕಲನದ ಪುಟ ಪುಟಗಳಲ್ಲೂ ಇವೆ. 48 ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ.

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books