ಕಳ್ಳಿ ಹೂಗಳು (ಅಬಾಬಿಗಳು)

Author : ಧನಪಾಲ ನಾಗರಾಜಪ್ಪ

Pages 80

₹ 80.00




Year of Publication: 2021
Published by: ಧನಪಾಲ ನಾಗರಾಜಪ್ಪ
Address: ನೆಲವಾಗಿಲು ಗ್ರಾಮ & ಅಂಚೆ, ನಂದಗುಡಿ ಹೋಬಳಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- 562122,,
Phone: 78925 46523

Synopsys

ಕಳ್ಳಿ ಹೂಗಳು-ಕವಿ ಲೇಖಕ ಧನಪಾಲ ನಾಗರಾಜಪ್ಪ ನೆಲವಾಗಿಲು ಅವರ ಅಬಾಬಿಗಳ ಸಂಕಲನ. ಅಬಾಬಿ ಎಂಬುದು ಒಂದು ಕಾವ್ಯ ಪ್ರಕಾರ. ಹನಿಗವನ, ಚುಟುಕುಗಳ ಮಾದರಿಯಲ್ಲಿ ಅಥವಾ ಅವುಗಳಿಗಿಂತ ಕಿರಿದಾಗಿ ಅಂಕಿತನಾಮದೊಂದಿಗೆ ರಚಿತಗೊಳ್ಳುವ ಅತೀ ಸಣ್ಣ ಕವಿತೆಗಳಿವು. 

ಕೃತಿಗೆ ಬೆನ್ನುಡಿ ಬರೆದ ಕವಿ ಕಾ.ಹು. ಚಾನ್ ಪಾಷ ಅವರು ‘ಷೇಕ್ ಕರೀಮುಲ್ಲಾ ಅವರು ಮೊದಲ ಬಾರಿಗೆ ‘ಬದರ್’ ಸಂಕಲನದ ಮೂಲಕ ತೆಲುಗು ಭಾಷೆಯಲ್ಲಿ ಅಬಾಬಿಗಳನ್ನು ಬರೆದರು. ಅದರಿಂದ ಪ್ರೇರಿತರಾದ ಧನಪಾಲ ನಾಗರಾಜಪ್ಪ ಅವರು ಮೊದಲ ಬಾರಿಗೆ ಕನ್ನಡ ಸಾಹಿತ್ಯಕ್ಕೂ ಈ ಅಬಾಬಿಗಳನ್ನು ಪರಿಚಯಿಸುತ್ತಿದ್ದಾರೆ. ಕಳ್ಳಿ ಹೂವುಗಳು ಈಗ ಕಾಣಸಿಗುತ್ತಿಲ್ಲ. ಜೀವನದಲ್ಲಿ ಮೌಲ್ಯಗಳಂತೆ ಅವುಗಳನ್ನು ಹುಡುಕಬೇಕಿದೆ. ಕಳಚಿಕೊಂಡಿರುವ ಸಂಬಂಧಗಳನ್ನು ಬೆಸೆಯಬೇಕಿದೆ. ಈ ನಿಟ್ಟಿನಲ್ಲಿ ಅಬಾಬಿಗಳು ಪ್ರೇರಣೆ ನೀಡುತ್ತವೆ. ಇಲ್ಲಿಯ ಅಬಾಬಿಗಳು ಸುಲಭವಾಗಿ ಓದಿಸಿಕೊಳ್ಳುತ್ತವೆ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಧನಪಾಲ ನಾಗರಾಜಪ್ಪ
(20 June 1987)

ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ನಾಗರಾಜಪ್ಪ ಹಾಗೂ ರಾಮಚಂದ್ರಮ್ಮ ದಂಪತಿಯ ಮಗನಾಗಿ 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ಜನಿಸಿದರು. ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 15 ವರ್ಷಗಳಿಂದ ಏರ್ ಮೆನ್ ಆಗಿ ವೈದ್ಯಕೀಯ ಸಹಾಯಕನ ವೃತ್ತಿ. ಕಳೆದ 15 ವರ್ಷಗಳಿಂದ ಸಾಹಿತ್ಯಿಕ ಕೃಷಿಯಲ್ಲಿ ನಿರತನಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ), ಕಾಡುವ ಕಥೆಗಳು (ಅನುವಾದಿತ ಕಥಾ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ತಣ್ಣೀರ ...

READ MORE

Related Books