ಸೂರು ಸೆರೆಹಿಡಿಯದ ಹನಿಗಳು

Author : ಅಜಿತ್ ಹೆಗಡೆ ಹರೀಶಿ

Pages 104

₹ 85.00
Year of Publication: 2018
Published by: ಯುಕ್ತ ಪ್ರಕಾಶನ
Address: ನಂ. 2109, ಮಧ್ವಾಚಾರ್ ರಸ್ತೆ, ಕೆ.ಆರ್‌. ಮೊಹಲ್ಲಾ, ಮೈಸೂರು- 570004
Phone: 9632587422

Synopsys

ಸೂರು ಸೆರೆಹಿಡಿಯದ ಹನಿಗಳು’ ಅಜಿತ ಹೆಗಡೆಯವರ ಕವನ ಸಂಕಲನ ಈ ಸಂಕಲನದಲ್ಲಿ  64 ಕವಿತೆಗಳಿವೆ. ಎಸ್ ಎನ್ ಸೇತುರಾಮ್ ಮುನ್ನುಡಿ, ಮಮತಾ ಅರಸೀಕೆರೆ ಅವರ ಆಶಯ ನುಡಿ, ರೇಣುಕಾ ರಮಾನಂದ ಅವರು ಬೆನ್ನುಡಿ ಬರೆದಿದ್ದಾರೆ.

ಮಮತಾ ಅರಸಿಕೆರೆ ಅವರು ಈ ಸಂಕಲನದ ಕವಿತೆಗಳ ಬಗ್ಗೆ ಹೀಗೆ ಬರೆದಿದ್ದಾರೆ-

ಡಾ. ಅಜಿತರ ಕವನ ಸಂಕಲನದ ಶೀರ್ಷಿಕೆಯೇ ಆಕರ್ಷಕವಾಗಿದೆ. ಸೂರು ಸೆರೆಹಿಡಿಯದ ಹನಿಗಳು ಸಂಕಲನದಲ್ಲಿ ಒಟ್ಟು ಅರವತ್ತನಾಲ್ಕು ಪದ್ಯಗಳಿವೆ. ಇವೆಲ್ಲಾ ಸಂಬಂಧಗಳ ಬಗ್ಗೆ, ವಿಷಾದ, ಎಚ್ಚರಿಕೆ, ತನ್ಮಯತೆ, ಪ್ರೇಮ, ವಿರಹ, ವ್ಯಸನ, ಅಟ್ಟಹಾಸ ಮೊದಲಾದ ವಿವಿಧ ಅಂಶಗಳ ಬಗ್ಗೆ ಮಾತನಾಡುತ್ತವೆ. ಕೆಲವು ಪದ್ಯಗಳು ನಿರ್ಲಿಪ್ತವಾಗಿ ಪರಿಸ್ಥಿತಿಯ ವಾತಾವರಣದಿಂದ ಹೊರನಿಂತು ರಚಿಸಿಕೊಂಡಂತೆ ಬರೆಸಿಕೊಂಡಿವೆ. ಮತ್ತೂ ಕುತೂಹಲವೆಂದರೆ ಕವನ ಸಂಕಲನದ ಶೀರ್ಷಿಕೆಯ ಮಾತು ಹಾಗಿರಲಿ ಕೆಲವು ಪದ್ಯಗಳ ಶೀರ್ಷಿಕೆಗಳಂತೂ ಅಚ್ಚರಿಗೀಡುಮಾಡುತ್ತವೆ. ನ್ಯಾಸಾಂತರ, ಹೇತ್ವಾಭಾಸ, ನಿಲಿಕೆ, ಮರುದ್ರುಮ, ಜಂಝೂನಿಳ ಹೀಗೆ ವಿಶಿಷ್ಟವೆನಿಸುವ ಶೀರ್ಷಿಕೆಗಳನ್ನೂ ಎಚ್ಚರಿಕೆಯಿಂದ ಆಯ್ಕೆ ಮಾಡಿ ಪದ್ಯಕ್ಕೆ ಒಗ್ಗಿಸಿ ಹೆಸರಿಟ್ಟ ಹಾಗಿದೆ. ಮತ್ತೆ ಕೆಲವು ಪದ್ಯಗಳನ್ನು ಶೀರ್ಷಿಕೆಗೆಂದೇ ಜೋಡಿಲಾಗಿದೆ ಎನಿಸುತ್ತದೆ. ಉದಾಹರಣೆಗೆ ಯಾಯತಿಯ ಯೌವನ, ಪಠ್ಯಕ್ರಮದಾಚೆ ಮೊದಲಾದವು' ಎಂದು ವಿವರಿಸಿದ್ದಾರೆ.

 

About the Author

ಅಜಿತ್ ಹೆಗಡೆ ಹರೀಶಿ
(24 August 1978)

ಸೊರಬ ತಾಲೂಕಿನವರಾದ ಅಜಿತ್ ಹೆಗಡೆ ಅವರು ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಪದವಿ ಪಡೆದಿರುವ ಅವರು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಎಂ.ಡಿ. ಪಡೆದಿದ್ದಾರೆ. ವೈದ್ಯರಾಗಿ ಸೊರಬದಲ್ಲಿ ನೆಲೆಸಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ಅಜಿತ್ ಹೆಗಡೆ ಅವರು ಪ್ರವೃತ್ತಿಯಿಂದ ಬರಹಗಾರ. ಪರಿಧಾವಿ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ಮತ್ತೊಂದು ಸಂಕಲನ ’ಕಾಮೋಲ’ ಅಚ್ಚಿಗೆ ಹೋಗಿದೆ.  ಬಿಳಿಮಲ್ಲಿಗೆಯ ಬಾವುಟ ಮತ್ತು ಸೂರು ಸೆರೆಹಿಡಿಯದ ಹನಿಗಳು ಅವರ ಪ್ರಕಟಿತ ಕವನ ಸಂಕಲನಗಳು. ವೈದ್ಯಕೀಯ ಲೇಖನಗಳ ಸಂಗ್ರಹ 'ಆರೋಗ್ಯದ ಅರಿವು' ಕೃತಿಯು ಕರಡು ತಿದ್ದುಪಡಿ ಹಂತದಲ್ಲಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಕಥೆ, ಕವನ ಮತ್ತು ವೈದ್ಯಕೀಯ ಲೇಖನಗಳು ಪ್ರಕಟವಾಗಿವೆ. ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ಅವರ ...

READ MORE

Related Books