ಕಡಲಿಗೆ ಕಳಿಸಿದ ದೀಪ

Author : ಟಿ. ಯಲ್ಲಪ್ಪ

Pages 80

₹ 50.00




Published by: ಸಂಚಯ ಪ್ರಕಾಶನ
Address: ಬೆಂಗಳೂರು

Synopsys

‘ಕಡಲಿಗೆ ಕಳಿಸಿದ ದೀಪ’ ಕೃತಿಯು ಟಿ. ಯಲ್ಲಪ್ಪ ಅವರ ಕವನಸಂಕಲನವಾಗಿದೆ. ಇಲ್ಲಿನ ಕವಿತೆಗಳು ಭಿನ್ನವಾದ ಲಯ, ಲವಲವಿಕೆಯಿಂದ ಗಮನ ಸೆಳೆಯುತ್ತವೆ. ಕವಿತೆಗೆ ಲೇಖಕರು ಆಯ್ದುಕೊಳ್ಳುವ ವಿಷಯ ಪದ್ಯ ಇಲ್ಲಿ ಭಿನ್ನವಾಗಿದೆ. ಕೆಲವು ಕವಿತೆಗಳು ತೆಳುವಾದರೂ ‘ಇಲ್ಲಿ ಹೆಜ್ಜೆಗಳ ಗುರುತಿಲ್ಲ, ಗೆಜ್ಜೆಗಳ ಸಪ್ಪಳವೂ ಇಲ್ಲ, ನಾನೇ ಕುಣಿಯುವುದ ಕಲಿತುಕೊಂಡೆ..’ ಎಂಬ ಸ್ವಂತಿಕೆಯನ್ನು ಕಂಡುಕೊಳ್ಳುವ ಇಲ್ಲಿನ ಕವಿತೆಗಳು ಕವಿಯ ಮುಂದಿನ ಹೆಜ್ಜೆಯ ಬಗ್ಗೆ ಭರವಸೆ ಹುಟ್ಟಿಸುತ್ತವೆ.

About the Author

ಟಿ. ಯಲ್ಲಪ್ಪ
(02 October 1970)

ಟಿ. ಯಲ್ಲಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣಪುರದಲ್ಲಿ  02-10-1970 ರಂದು ಜನಿಸಿದರು. ಕೃಷಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಯಲ್ಲಪ್ಪನವರು ಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಶಾಲಾ ಕಾಲೇಜುಗಳ ಅನೇಕ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತರು. ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇಪ್ಪತ್ತೆರಡರ ಅಳಲು(ಲಲಿತಾ ಪ್ರಬಂಧ), ಕಡಲಿಗೆ ಕಲಿಸಿದ ದೀಪ ಚಿಟ್ಟೆಮತ್ತು ಜೀವಯಾನ, ನವಿಲಿಗೆ ಬಿದ್ದ ಕತ್ತಲ ಕನಸು, ಇವರ ಕಡಲಿಗೆ ಕಳಿಸಿದ ದೀಪ ಕೃತಿಯು ANKLETS ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ...

READ MORE

Related Books