ನೀರ್ ತೊಟ್ಟಿಲು

Author : ಮಾರ್ಷಲ್ ಶರಾಂ

Pages 104

₹ 90.00




Year of Publication: 2014
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಮಾರ್ಷಲ್ ಶರಾಂ ಅವರ ’ನೀರ್‍ ತೊಟ್ಟಿಲು’ ಕವನ ಸಂಕಲನವು ತುಂಬಾ ವಿಶೇಷವಾದುದು.  ಜೀವ ಜಲ ಎಂದೇ ಕರೆಯಲಾಗುವ ನೀರು ಏನೆಲ್ಲ ಸಮಸ್ಯೆಗಳಿಗೆ ನಮ್ಮನ್ನು ಒಡ್ಡಿದೆ ಎನ್ನುವುದನ್ನು ಮುಳುಗಡೆಯಾದ ಊರುಗಳ ಹೆಸರುಗಳ ಮೂಲಕವೇ ಹೇಳುವ ಲೇಖಕರು ಈ ಕವನದ ರಚನೆ ಮಾಡಿದ್ಧಾರೆ.

ನೀರು,  ನೀರವತೆ , ನಿರಾಕಾರ ,ನೀರಾವರಣ,  ನೀರ್‍ದಾರಿ , ನೀರ್‍ಕೇರಿ , ನೀರ್‍ಮನೆ ಮೊದಲಾದ ಶಬ್ದಗಳ ಧ್ವನಿ ಸಪ್ಪಳ ಮನಸ್ಸಿಗೆ ತಾಗುತ್ತದೆ. ನೀರಾಭರಣ ನೀರೂರು ನೀರೆಯರು ಅನ್ನುವಲ್ಲಿ ನೀರಿನ ಅವಾಂತರ ಶಿಖರಕ್ಕೆ ಏರಿದ ಬಗ್ಗೆಯೂ ಕುರಿತು ಪ್ರಸ್ತಾಪಿಸುತ್ತಾರೆ. ಅಭಿವೃದ್ದಿಯ ಅಮಲಿನಲ್ಲಿ ಕಳೆದುಕೊಂಡ ವಸ್ತು ವಿಷಯಗಳನ್ನು ಈ ಕೃತಿ ಪ್ರಸ್ತಾಪಿಸುತ್ತದೆ.

About the Author

ಮಾರ್ಷಲ್ ಶರಾಂ

ಮಾರ್ಷಲ್ ಶರಾಂ- ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಡಾ.ಮಾರ್ಷಲ್ ಶರಾಂರವರು ಉಪನ್ಯಾಸ ವೃತ್ತಿಯೊಂದಿಗೆ ಕೆಲವು ವಿಶೇಷ ಪ್ರವೃತ್ತಿಗಳನ್ನು ರೂಢಿಸಿಕೊಂಡಿದ್ದಾರೆ. ಪರಿಸರ ಹೋರಾಟ, ಪ್ಲಾಸ್ಟಿಕ್ ನಿರ್ಮೂಲನಾ ಚಳುವಳಿ, ಚಾರಣಗಳ ಸಂಘಟನೆ, ವ್ಯಕ್ತಿತ್ವ ವಿಕಸನ ಶಿಬಿರಗಳು, ಮಕ್ಕಳ ಶಿಬಿರಗಳು ಹೀಗೆ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಸಂಸ್ಕೃತಿಯ ಕುರಿತಂತೆ ಇವರು ಮುನ್ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರಸಿದ್ದ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ನೂರೈವತ್ತಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಮರ್ಶಾ ಲೇಖನಗಳನ್ನು ...

READ MORE

Related Books