ಗುಬ್ಬಚ್ಚಿ

Author : ಎಚ್. ವಿಧಾತ್ರಿ ರವಿಶಂಕರ್

Pages 60

₹ 50.00




Year of Publication: 2021
Published by: ವರ್ಷಾತ್ರೀ ಪ್ರಕಾಶನ
Address: #34, ಬಿ.ಬಿ ರಸ್ತೆ, ಶಿವಮೊಗ್ಗ
Phone: 9632896020

Synopsys

‘ಗುಬ್ಬಚ್ಚಿ’ ಕೃತಿಯು ಎಚ್. ವಿಧಾತ್ರಿ ರವಿಶಂಕರ್ ಅವರ ಕವನಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಶ್ರೀಕಾಂತ್ ರಾವ್ ಸಿದ್ದಾಪುರ ಅವರು, `ಗುಬ್ಬಚ್ಚಿ ಎಳೆಯ ಮಕ್ಕಳ ಮನಸೆಳೆವ ಶಿಶುಗೀತೆಗಳ ಸಂಕಲನವಾಗಿದೆ. ಇಲ್ಲಿನ ಪದ್ಯಗಳನ್ನು ಓದಿದಾಗ ಬಾಲ್ಯ ಸಹಜ ಭಾಷೆಯಿದೆ. ಮುಗ್ಧ ಮಕ್ಕಳಲ್ಲಿ ಕೃತಕತೆಯನ್ನು ಹೇಗೆ ಹುಡುಕುವುದು? ಅದೆಲ್ಲ ಬೆಳೆದವರ ಕಸರತ್ತು ಸಹಜ ಮುಗ್ಧತೆಯ ಭಾಷೆ ಮನಸ್ಸಿಗೆ ಮುದ ಕೊಡುತ್ತದೆ. ಪದ್ಯ ಬರೆದ ವಿಧಾತ್ರಿ, ಛಂದಸ್ಸನ್ನು ಅರಿತವಳಲ್ಲ. ಅದನ್ನು ಅರಿಯುವ ವಯಸ್ಸೂ ಅಲ್ಲ. ಆದರೆ ಗೀತೆಗಳಲ್ಲಿ ಲಯ ಅನಾಯಾಸವಾಗಿ ಬಂದಿದೆ. ಗೀತೆಗಳನ್ನು ಓದುತ್ತಿರುವಂತೆ ಲಯವೇ ನಮ್ಮಲ್ಲಿ ಕುಣಿತ ತರಿಸುತ್ತದೆ. ತಾಳ ಹಾಕಿಸುತ್ತದೆ. ಇದೂ ಬಾಲ್ಯ ಭಾವನೆಗೆ ಸಹಜವಾಗಿ ಒಲಿದ ಪದ್ಯ ರಚನಾ ಶೈಲಿಯಾಗಿದೆ. ಹೀಗೆ ಬಾಲ್ಯದ ವಿಚಾರ ಕುರಿತ ಕವನಗಳು ಇಲ್ಲಿ ಅಡಕವಾಗಿವೆ. ಇಲ್ಲಿ ಪದ್ಯದ ಭಾಷೆಯಂತೆ ವಸ್ತೂಗಳಲ್ಲೂ ಬಾಲ್ಯ ಸಹಜ ಕುತೂಹಲಗಳ ಪರಿಸರವಿದೆ. ಮಕ್ಕಳ ಮೆಚ್ಚಿನ ಪ್ರಾಣಿಗಳಿವೆ, ಪರಿಸರಗಳಿವೆ, ದೇಶಭಕ್ತಿಯಿದೆ, ವಸ್ತುಗಳ ಆಯ್ಕೆಯಲ್ಲೂ ಕೃತಕತೆಯ ಸುಳಿವಿಲ್ಲ. ಶಿಕ್ಷಣ ಎಂದರೆ ಮಾಹಿತಿಗಳ ಸಂಗ್ರಹವಲ್ಲ, ಕಂಠಪಾಠವಲ್ಲ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳ ಅನಾವರಣ. ಈ ಅರಳುವಿಕೆಗೆ ಶಿಕ್ಷಣ ಪೂರಕವಾಗಿರಬೇಕು. ಈ ಶೀಶುಗೀತೆಗಳ ಸಂಕಲನದಲ್ಲಿ ಅದು ಸಾಕಾರವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಎಚ್. ವಿಧಾತ್ರಿ ರವಿಶಂಕರ್

ಕವಯತ್ರಿ ಎಚ್. ವಿಧಾತ್ರಿ ರವಿಶಂಕರ್ ಅವರು ಮೂಲತಃ ಕುಂದಾಪುರದವರು. ಪ್ರಸ್ತುತ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ಧಾಪುರದ ಸರಸ್ವತಿ ವಿದ್ಯಾಲಯದಲ್ಲಿ ಮೂರನೇ ಕ್ಲಾಸಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೃತಿಗಳು: ಗುಬ್ಬಚ್ಚಿ ...

READ MORE

Related Books