ಸೂಜಿಗಲ್ಲು

Author : ಲತಾ ಗುತ್ತಿ

Pages 79

₹ 55.00
Year of Publication: 2002
Published by: ನಿಸರ್ಗ ಪ್ರಕಾಶನ
Address: ಶಂಕರನ ಕಾಂಪ್ಲೆಕ್ಸ್ ನಂ 300 ಲಾಂಗ್ ಫೋರ್ಡ್ ರೋಡ್ ಬೆಂಗಳೂರು-560025
Phone: 6555689

Synopsys

ಲೇಖಕಿ ಲತಾ ಗುತ್ತಿ ಅವರದು ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಮುಖ ಹೆಸರು.  ಲತಾ ಅವರ ಎಂಟನೆಯ ಕೃತಿಯಾಗಿ ಈ ’ಸೂಜಿಗಲ್ಲು’ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ’ಯುಗಾದಿ’ ಪದ್ಯದಲ್ಲಿ ತನ್ನ ಯೋಜನೆಯನ್ನು ಹಾಳು ಮಾಡಿದ ಮಗನ ತುಂಟಾಟವನ್ನು ಕಂಡು ಖುಷಿಪಡಬಲ್ಲ ಪ್ರಬುದ್ಧ ತಾಯಿಯಿದ್ದರೆ, ಲಾಲ್‌ಬಾಗ್, ಇಂಕದವನ ಕವಿತೆ-ಇಂತಹ ಪದ್ಯಗಳು ತುಂಟುತನದಿಂದ ಕೂಡಿವೆ. ಸಮಗ್ರ ಕವಿತೆಗಳಲ್ಲಿ ಕಂಡು ಬರುವ ಒಂದು ಪ್ರಮುಖ ಅಂಶವೆಂದರೆ ವೈರುಧ್ಯಗಳು. ಕವಯತ್ರಿ ತುಂಬ ಕ್ಷಿಪ್ರವಾಗಿ ಹಾಗೂ ಸೂಕ್ಷ್ಮವಾಗಿ ಗ್ರಹಿಸುತ್ತಾರೆ ಎಂಬುದು ಈ ಕವನಸಂಕಲನದಿಂದ ತಿಳಿದು ಬರುತ್ತದೆ.

About the Author

ಲತಾ ಗುತ್ತಿ
(12 August 1953)

ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.  “ಪ್ರವಾಸ ಸಾಹಿತ್ಯ ...

READ MORE

Related Books