ಮೂಕ ಮನದ ಮಾತು

Author : ಸುರೇಶ ಜಿ.ಎಸ್.

Pages 133

₹ 120.00
Year of Publication: 2020
Published by: ಗೌರಿಶಂಕರ ಪ್ರಕಾಶನ
Address: ಗರಗದಹಳ್ಳಿ ತಾಂಡ್ಯ -1 ಅಜ್ಜಂಪುರ ತಾ. ಚಿಕ್ಕಮಗಳೂರು ಜಿಲ್ಲೆ.
Phone: 9611170560

Synopsys

ಸುರೇಶ್ ಜಿ.ಎಸ್ ಅವರ ಮೊದಲ ಕವನ ಸಂಕಲನ ’ ಮೂಕ ಮನದ ಮಾತು’. ಕಲಾಪ್ರಿಯ ಇವರ ಕಾವ್ಯನಾಮ. ಈ ಸಂಕಲನದಲ್ಲಿ ಒಟ್ಟು 90 ಕವನಗಳಿವೆ. ಈ ಕೃತಿಗೆ ಮುನ್ನುಡಿ ಬರೆದ ರಾಘವೇಂದ್ರ ಪಾಟೀಲ, ’ಈ ಕೃತಿಯಲ್ಲಿ ಕಾವ್ಯಾಭಿವ್ಯಕ್ತಿಯು ಅನೇಕ ಸಂದರ್ಭದಲ್ಲಿ ಆಕ್ಟಿವಿಷ್ಟ್ ನಿಲುವನ್ನು ತೋರುತ್ತದೆ. ಅತ್ಯಂತ ಚಲನಶೀಲವಾದ ಸುರೇಶ್ ಅವರ ಶಿಕ್ಷಕ ವ್ಯಕ್ತಿತ್ವ ಮತ್ತು ಸಮಾಜದ ಬಗೆಗಿನ ಸದುದ್ದೇಶಗಳ ನೆಲೆಯು ಈ ಕಾವ್ಯಕ್ಕೆ ಇಂಥ ಆಕ್ಟಿವಿಷ್ಟ್ ದೀಕ್ಷೆಯನ್ನು ಕೊಟ್ಟಿರುವುದು ಸಹಜವಾಗಿದೆ.’ ಎಂದು ಪ್ರಶಂಸಿಸಿದ್ದಾರೆ.

About the Author

ಸುರೇಶ ಜಿ.ಎಸ್.
(10 July 1984)

ಯುವಕವಿ ಸುರೇಶ ಜಿ.ಎಸ್. ಅವರು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಪುಟ್ಟ ಹಳ್ಳಿ ಗರಗದಹಳ್ಳಿ ತಾಂಡ್ಯದಲ್ಲಿ 1984ರ ಜುಲೈ 10ರಂದು ಜನಿಸಿದರು. ತಂದೆ - ಶಂಕರನಾಯ್ಕ, ತಾಯಿ -  ಗೌರಿಬಾಯಿ. ತಮ್ಮ ಹುಟ್ಟೂರಿನಲ್ಲೆ ಮೂಲ ಶಿಕ್ಷಣವನ್ನು ಪಡೆದ ಇವರು ಕಾಲೇಜು ಶಿಕ್ಷಣವನ್ನು ತರೀಕೆರೆ ತಾಲೂಕಿನಲ್ಲಿ ಅಭ್ಯಸಿಸಿದರು. ವೃತ್ತಿಯಿಂದ ಶಿಕ್ಷಕ, ಪ್ರವೃತ್ತಿಯಿಂದ ಸಾಹಿತ್ಯಾಸ್ತರು.  ಇವರ ಶೈಕ್ಷಣಿಕ ಸಾಧನೆಗೆ 2011ರಲ್ಲಿ ಕನಕಗಿರಿಯ ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ‘ಕೊಪ್ಪಳ ಜಿಲ್ಲಾ ಉತ್ತಮ ಶಿಕ್ಷಕ' ಪ್ರಶಸ್ತಿ, 2014 ರಲ್ಲಿ ಶಿಕ್ಷಕರ ಕಲ್ಯಾಣನಿಧಿ ವತಿಯಿಂದ 'ಗಂಗಾವತಿ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, 2019ರಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಗಂಗಾವತಿ ...

READ MORE

Related Books